ಎದೆ ಆಳದ ಮೊದಲ ಮಾತು
ಎದೆ ಆಳದ ಮೊದಲ ಮಾತು
ನೀನೊಂದು ತೀರಾ.. ನಾನೊಂದು ತೀರಾ..
ಸೇರುವುದು ಯಾರು ಯಾವ ತೀರವ ತಿಳಿಯದಾಗಿದೆ..
ಅಲೆಯಂತೆ ನನ್ನ ಮುಟ್ಟಿ ಹಿಂತಿರುಗುವ ಆಟ ನಿನ್ನದು..
ಮಣ್ಣಂತೆ ಕರಗಿ ನಿನ್ನ ಜೊತೆಯಲೇ ಬರುವ ಆಸೆ ನನ್ನದು ..
ಭೋರ್ಗೆರೆದು ಅಪ್ಪಳಿಸುವ ನಿನ್ನನ್ನು ..
ಅಪ್ಪಿಕೊಳ್ಳಲು ಸಾಧ್ಯವೇ ನನಗಿನ್ನೂ ..
ಬಂದು ಸೇರಲೇ ವಿಶಾಲವಾದ ನಿನ್ನ ತೋಳಲಿ ..
ಚಿನ್ನಾ!..
ಚಿಪ್ಪಿನಲ್ಲಿ ಮುತ್ತಿನಂತೆ ನಿನ್ನಲಿ ನಾ ಸೆರೆಯಾಗಲು ..
ಅನುಮತಿ ನೀಡುವೆಯ ನಿನ್ನ ತಂಪಾದ ದನಿಯಲಿ ?!!