ಭರತ ಭೂಮಿ
ಭರತ ಭೂಮಿ


ರಾಮ ಭರತರ ಸುವಿಚಾರವಿಹುದು
ಸತ್ಯ ಹರಿಶ್ಚಂದ್ರರ ಸತ್ಯ ಗಾಥೆಗಳಿಹುದು
ಕರ್ಣ ವಿಕ್ರಮಾದಿತ್ಯರ ದಾನಾದಿಗಳಿಹುದು
ಇದುವೇ ಭರತ ಭೂಮಿ, ಇದುವೇ ಎಮ್ಮ ಭೂಮಿ.
ಸುಗುಣನಾಗಲು ಧರೆಯಲ್ಲಿ ಬೇರೆ ನಾಡುಂಟೆ ?
ಆಧುನಿಕ ಪ್ರಭುವೇ ನೀನೆ ಬಲ್ಲೆ !
ಕಲಾಮರ ವಿಜ್ಞಾನ ವಿಹಾರವಿಹುದು
ರಾಧಾಕೃಷ್ಣರ ಶಿಕ್ಷಣ ವಿಚಾರವಿಹುದು
ಸರ್ವಜ್ಞರಾದಿ ಪುರುಷರ ನೀತಿಪಾಠಗಳಿಹುದು
ಇದುವೇ ಭರತ ಭೂಮಿ, ಇದುವೇ ಎಮ್ಮ ಭೂಮಿ.
ಸುಜ್ಞಾನಿಯಾಗಲು ಧರೆಯಲ್ಲಿ ಬೇರೆ ನಾಡುಂಟೆ ?
ಆಧುನಿಕ ಪ್ರಭುವೇ ನೀನೆ ಬಲ್ಲೆ !
ರಾಣಾಪ್ರತಾಪನ ಪರಾಕ್ರಮವಿಹುದು
ಅಬ್ಬಕ್ಕದೇವಿಯ ವೀರಗಾಥೆಗಳಿಹುದು
ಸಂಗೊಳ್ಳಿ ರಾಯಣ್ಣನ ಪೌರುಷವಿಹುದು
ಇದುವೇ ಭರತ ಭೂಮಿ, ಇದುವೇ ಎಮ್ಮ ಭೂಮಿ.
ಸಾಹಸಿಯಾಗಲು ಧರೆಯಲ್ಲಿ ಬೇರೆ ನಾಡುಂಟೆ ?
ಆಧುನಿಕ ಪ್ರಭುವೇ ನೀನೆ ಬಲ್ಲೆ !
ರಾಮಾಯಣ ಮಹಾಭಾರತದ ತವರಿಹುದು
ಕುವೆಂಪು ಬೇಂದ್ರೆಯರ ನಾಟಕ ಸ್ವಾರಸ್ಯವಿಹುದು
ಪ್ರೇಮಚಂದ ಠಾಗೋರರ ಕವನಗಳಿಹುದು
ಇದುವೇ ಭರತ ಭೂಮಿ, ಇದುವೇ ಎಮ್ಮ ಭೂಮಿ.
ಸಾಹಿತ್ಯಕ್ಕೆ ಧರೆಯಲ್ಲಿ ಬೇರೆ ನಾಡುಂಟೆ ?
ಆಧುನಿಕ ಪ್ರಭುವೇ ನೀನೆ ಬಲ್ಲೆ !
ವಿಂಧ್ಯ,ಹಿಮಾಚಲ ಪರ್ವತವಿಹುದು
ನರ್ಮದಾ ಸಿಂಧು ಕಾವೇರಿಗಳು ಹರಿಯುತಿಹುದು
ಪಚ್ಚ ಹಸಿರ ತಾಯಾಗಿಹುದು
ಇದುವೇ ಭರತ ಭೂಮಿ, ಇದುವೇ ಎಮ್ಮ ಭೂಮಿ.
ಸಿರಿ ಸಂಪತ್ತಿಗೆ ಧರೆಯಲ್ಲಿ ಬೇರೆ ನಾಡುಂಟೆ ?
ಆಧುನಿಕ ಪ್ರಭುವೇ ನೀನೆ ಬಲ್ಲೆ !