ವಚನ ಸಿಂಧು
ವಚನ ಸಿಂಧು
1 min
118
ಮನುಜನ ಕಪಟಕ್ಕೆ ಎಲ್ಲೆ ಎಲ್ಲಿದೆ ?
ದೇವರನು ಪ್ರತಿಷ್ಠಾಪಿಸಿರುವರು ಕೊಳಕಿನಲ್ಲಿ,
ಮನುಜತ್ವವನ್ನು ಇರಿಸಿದ್ದಾರೆ ಪುಸ್ತಕಗಳ್ಳಲ್ಲಿ,
ಎಂದಿಗೀ ಆಟಕ್ಕೆ ಕೊನೆಯಿರುವುದು?
ಓ ಆಧುನಿಕ ಪ್ರಭುವೇ ನೀನೇ ಬಲ್ಲೆ . ||1||
ಬೇರೆಯವರನು ನಿನ್ನ ಬೆರಳಿಂದ ತೋರಿಸದಿರು ಕಯ್ಯೇ
ನಿನ್ನ ಬೆರಳುಗಳ ನೀನೇ ತೊಳೆದರು ಸಾಕು
ಪರರಿಗೆ ಮೂತಿಯ ಒರೆಸಲೂಬೇಡ
ಮತ್ತಾರದೋ ಕಯ್ಯ ಕಟ್ಟಲೂ ಬೇಡ
ಪರರ ಚಿಂತೆ ಯಾಕೀ ಮಾನವನಿಗೆ ಆಧುನಿಕ ಪ್ರಭುವೇ ||2||
ಕೊಂಕು ಮಾತಿನೊಳು ಟ್ರಂಕನ್ನು ಕಟ್ಟುವರು
ಸರ್ವ ದಿಕ್ಕಿನೊಳು ಓಯ್ದರೆ ಏನು ಪ್ರಯೋಜನ ?
ಸುರಿವುದು ದ್ವೇಷದ ಅಗ್ನಿ ಬಾಣಗಳು
ದೂರ ಹೋಗುವುದು ನಮ್ಮ ಸದ್ಗುಣಗಳು
ಕೊಂಕಿನ ಕೊಲೆಯೆಂದು ಆಧುನಿಕ ಪ್ರಭುವೇ ? ||3||