STORYMIRROR

Sanath Kumar B

Others

2  

Sanath Kumar B

Others

ವಚನ ಸಿಂಚನ

ವಚನ ಸಿಂಚನ

1 min
3.0K

ಗುಳೆ ಹೋಗುವ ಮನಕೆ ನಿಂತಿದ್ದು ಆದುದೇನು ?

ಹಾರದ ಹಕ್ಕಿಗೆ ಪುಕ್ಕವಿದ್ದು ಆದುದೇನು ?

ಹೊಳೆಯದಾ ವಜ್ರಕ್ಕೆ ಬೆಲೆಕಟ್ಟಿ ಆದುದೇನು ?

ಖುಷಿಯ ಮನವಿದ್ದರೆ ಚಿಂತೆಯಿಂದ ಆದುದೇನು ?

ಎಲ್ಲ ಮರೆಸಿ ಖುಷಿಯ ಕೊಡುವೆಯಾ ಆಧುನಿಕ ಪ್ರಭುವೇ ?! ||1||


ಕರಗಿದಾ ಮನದಮೇಲೆ ಕೋಪವೇಕೆ

ಕೋಪದಾ ಮನದಮೇಲೆ ಕರುಣೆಯೇಕೆ

ಕರುಣೆಯ ಕರಾರು ಕ್ಷಣಿಕ ಮಾತ್ರ

ಕೋಲಾಹಲ ಕೂಡುವುದು ಕರಗತ

ಕಾರುಣ್ಯರನು ಕೂಡಿಸು ಆಧುನಿಕ ಪ್ರಭುವೇ! || 2 ||


ಹೊರೆಟಿಹೆನು ಹಾಗೆ ಹೊಂಬಣ್ಣದ ಹಂಗಿನಲಿ 

ಹೊಂಗನಸ ಹಾಸು ಹಾಸಿ ಹೊರಳಾಡಲು 

ಹುಡುಕಾಡಿದೆ ಹೂವಿನಲಿ ಹೊಂಬಣ್ಣವ

ಹಸಿರ ಹಡಗ ಹರಿದು ಹುಡುಕಿದೆ 

ಹುರುಪ ಹುಳಿಯಲಿ ಹಾರಾಡಿ ಹುಡುಕಿದೆ 

ಹುಡುಕಿದೆ ಹೊಂಬಣ್ಣವ ಹರಿಯುವ ಹೊಳೆಯಲಿ 

ಜೀವನದ ಹೊಂಬಣ್ಣ ಸಿಕ್ಕೀತೇ ಆಧುನಿಕ ಪ್ರಭುವೇ ? || 3 ||



Rate this content
Log in