ಅವಳೆಂಬ ಭಾವನೆ
ಅವಳೆಂಬ ಭಾವನೆ


ನನ್ನೊಲವಿನ ಭಾವಗಳ ಸಾಲಲಿ ನಿಂತ
ನೀನೊಂದು ಅಪರೂಪದ ಅತೀ ಅದ್ಭುತ
ನಿನ್ನೊಲುಮೆಯ ಕುಲುಮೆಯಲಿ ಬೇಯುತ
ನನಗೆ ನಾನಾದೆ ಅಪರಿಚಿತ
ನನ್ನೆದೆಯ ಗೋಡೆಗೆ ಒರಗಿ ಕೊಡುವೆಯಾ ಹಿತ
ನಾ ಬರುವೆ ನಿನ್ನೊಲವ ಮನೆಗೆ ಬಾಡಿಗೆ ಸಹಿತ
ನಿನ್ನೆದೆಯ ಗೂಡನಾಬಿಟ್ಟು ಹೋಗಲಾರೆ
ನೀ ನನ್ನ ಬದುಕಿನ ಅಮೃತಧಾರೆ
ಭಾವಸಾಗರದಲಿ ನಿಂತ ನಾನು ಮೂಕವಿಸ್ಮಿತ
ನೀನಿಲ್ಲವಾದರೆ ತೇಯುವೆ ಈ ಜೀವ ಖಚಿತ
ಭಾವನೆಗಳ ಬಾಡಿಗೆ ಭಾರವಾಗಿದೆ ಬಾರೆ
ನೀ ಬಂದರೆ ಬಾಳಲಿ ಕಡಿಮೆಯಾಗುವದೀ ಹೊರೆ