Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Arjun Maurya

Romance Inspirational Thriller

4  

Arjun Maurya

Romance Inspirational Thriller

ಅರಳಲೀ ಮತ್ತೆ...

ಅರಳಲೀ ಮತ್ತೆ...

1 min
232



ಅರಳಬೇಕಾದ ಹೂವೇ?

ನೋವನಾರು ಕೊಟ್ಟರು ಹೇಳೇ?

ಬರಬೇಕಾದ ಸೂರ್ಯ ಬರಲಿಲ್ಲವೇ

ಮಳೆಹನಿ ಮುತ್ತಿಡಲಿಲ್ಲವೇ?


ಉದಯಕಾಲದಿ ನಲಿದ ನಿನ್ನ

ಹರಷದ ಘಳಿಗೆ ನೆನಪಿದೆ ಇನ್ನ l

ಸಂಜೆಗೆ ಸಂಕಟವೇಕೆ ನಿನಗೆ?

ಕತ್ತಲಾಗಬಹುದು ಎಂದೇ?


ಬೇರು ನಿನ್ನದೇ ರೂಪ ನಿನ್ನದೇ

ಭಾವ ಮಾತ್ರ ನನ್ನದೆ l

ಹೇಳಬಾರದ ವಿಷಯವ

ಕೇಳಬಹುದೇ ಮೆಲ್ಲಗೆ ll


ಜಗದ ಚಪ್ಪರದೊಳಗಿನ ನಿನ್ನ

ಸುಂದರ ವದನಕೆ ತಾಗಿದ l

ದೃಷ್ಟಿದೋಷಕೆ ಚೆಲುವು ಬಾಡಲು

ಕನಲಿದೆ ಎನ್ನ ಒಡಲು ll


ಬರುವನು ನಿನ್ನ ಸೂರ್ಯನು

ಬಾಡದಿರು ಹೂವೇ..l

ಗಾಳಿಬೆಳಕಿನ ಹೂರಣದಿ

ಮತ್ತೆ ಬದುಕಲಿ ಪ್ರೇಮವು ll



Rate this content
Log in

Similar kannada poem from Romance