ಆಲಿಸು ನನ್ನ ಮಾತನ್ನು
ಆಲಿಸು ನನ್ನ ಮಾತನ್ನು


ಆಲಿಸು ನನ್ನಯ ಮಾತುಗಳನ್ನು
ಕಿವಿಗೊಟ್ಟು ಕೇಳುವೆ ನಿನ್ನ ಉತ್ತರವನ್ನು
ಕಣ್ಣು ಮಿಟುಕಿಸದೆ ನೋಡುವೆ ನಿನ್ನನ್ನು
ಹಾಯಾಗಿ ಹೇಗಿರುವುದು ನೀನು ಇಲ್ಲದೆ ನಾನು
ಮನ ಹೀಗಾಗಲೆ ಕುಣಿದಾಡಿದೆ
ನೆನೆಯುತ್ತ ಮಧುರ ಕ್ಷಣಗಳನ್ನು
ತಂಪಾದ ಗಾಳಿ ಕೊಟ್ಟಿದೆ
ನೀನು ಬರುವ ಸೂಚನೆಯನ್ನು
ದುಂಬಿ ಜಿಗಿಯುವುದು ಒಂದು ಹೂವಿಂದ ಇನ್ನೋoದಿಗೆ
ನಾನು ಮಾತ್ರ ನೋಡುವುದು ನಿನ್ನನ್ನೆ
ಹೇಗೆ ತಿಳಿಸಲಿ ನನ್ನ ವಿರಹ
ಮನ ತೆರೆದು ಓದು ನನ್ನ ಬರಹ
ಬಂದು ಸೇರು ನನ್ನನು
ಕಾದಿರುವೆ ನಾನು ನಿನ್ನನು ...!