STORYMIRROR

Vijayalaxmi C Allolli

Horror Tragedy Crime

4  

Vijayalaxmi C Allolli

Horror Tragedy Crime

ಭಯಾನಕ

ಭಯಾನಕ

1 min
446

ಅವಳೆಂದೂ ಊಹಿಸಿರಲಿಲ್ಲ ಅವನು ಹೀಗೆ ಇರಬಹುದಾ ಎಂದು. ಅವನ ನಿಜರೂಪ ಕಂಡು ಅದು ಅವಳಿಗೆ ಭಯಾನಕ ಅನಿಸಿತು.

ಅವರಿಬ್ಬರು ಕಾಲೇಜಿನಲ್ಲಿ ಕೂಡಿ ಓದಿದವರು. ಸ್ನೇಹ ಪ್ರೇಮಕ್ಕೆ ತಿರುಗಿತ್ತು, ಹೆತ್ತವರ ಮಾತು ಕಿವಿಗೆ ಹಾಕಿಕೊಳ್ಳದಷ್ಟು ಘಾಢವಾಗಿತ್ತು ಅವರಿಬ್ಬರ ಪ್ರೇಮ. ಅದು ನಿಜವಾದ ಪ್ರೇಮವಾಗಿರಲಿಲ್ಲ, ಬದಲಾಗಿ ಅದೊಂದು ಆಕರ್ಷಣೆ. ಹೆತ್ತವರ ಮಾತು ಕೇಳಿ ಚೆನ್ನಾಗಿ ಓದಿ, ಏನಾದರೂ ಸಾಧನೆ ಮಾಡದಿದ್ದರೂ ಪರವಾಗಿಲ್ಲ, ಜೀವನವನ್ನು ನಿರ್ವಹಿಸುವಷ್ಟು ಆದಾಯ ಪಡೆಯುವಷ್ಟು ಶಕ್ತರಾಗಲಿ ಎನ್ನುವುದೊಂದೆ ಹೆತ್ತವರ ಆಶಯವಾಗಿತ್ತು.

ಅದನ್ನರಿಯದ ಅವರ ಹರೆಯ ಅವರನ್ನು ದಾರಿ ತಪ್ಪಿಸಿತ್ತು.

ಹೆತ್ತವರನ್ನು ವಿರೋಧಿಸಿ ಮದುವೆಯೂ ಆದರು.

ಓದು ಪೂರ್ಣ ಗೊಳಿಸದೆ, ಆದಾಯವೂ ಇರದೆ ಜೀವನ ನಿರ್ವಹಣೆ ಕಷ್ಟವಾಯಿತು. ಅವನು ಮೊದಲಿನಂತಿರದೆ ಮೃಗಕ್ಕಿಂತ ಕಡೆಯಾಗಿ ವರ್ತಿಸತೊಡಗಿದ. ಕೆಲವೊಮ್ಮೆ ಬೈಗುಳ, ಕೆಲವೊಮ್ಮೆ ಕಪಾಳಮೋಕ್ಷ, ಇನ್ನೂ ಮುಂದುವರೆದು ಅವಳ ಕುತ್ತಿಗೆಗೆ ಕೈ ಹಾಕಿ ತನ್ನ ಭಯಾನಕವಾದ ಇನ್ನೊಂದು ಮುಖ ತೋರಿಸಿಯೇ ಬಿಟ್ಟಿದ್ದ. ಹೆತ್ತವರಿಗೆ ಮಾಡಿದ ಮೋಸಕ್ಕೆ ಆಗಬೇಕಾದ ಶಿಕ್ಷೆಯೇ ತನಗೆ ಇದು. ಅವಳು ಅನುಭವಿಸುತ್ತಾ ನರಳಿ, ನರಳಿ ಇಹಲೋಕವನ್ನೆ ಬಿಟ್ಟು ನಡೆದಳು.


Rate this content
Log in

Similar kannada story from Horror