STORYMIRROR

Vijaya Bharathi

Classics Inspirational Others

4  

Vijaya Bharathi

Classics Inspirational Others

ಭಾರತಾಂಬೆಯ ಮೊರೆ

ಭಾರತಾಂಬೆಯ ಮೊರೆ

1 min
190


ಅಂದು

 

ಸಂಕೋಲೆ ಕಳಚಿತು

ಸ್ವಾತಂತ್ರ್ಯ ಲಭಿಸಿತು

ವಿಜಯದಾ ಹೊನ್ನ ಕಳಶ

ಎನ್ನ ಮುಡಿ ಸೇರಿತು

ವಂದೇ ಮಾತರಂ

ವಂದೇಮಾತರಂ

ವಂದೇ ಮಾತರಂ

ಜೈಕಾರವೆನ್ನ ಕಿವಿದೆರೆಯ ಹೊಕ್ಕಿತು

ತ್ರಿವರ್ಣ ಧ್ವಜ ಹಾರಾಡಿತು

ಮಾತೃ ಭಕ್ತಿಯ ಮಹಾಪೂರ

ಎಲ್ಲೆಡೆಯೂ ಹರಿಯಿತು

ಅದ ಕಂಡ ಎನ್ನ ಮನ

ಸಂತಸದಿ ಅರಳಿತು

ಹೃದಯ ಹರುಷದಿ ಹಿಗ್ಗಿತು

ನಡುನಡುವೆ ಕಾಡಿತು

ಹುತಾತ್ಮ ಪುತ್ರರ ನೆನಪು

ಹೆತ್ತೊಡಲ ಕಲಕಿತು

ಮನ ಮಮ್ಮಲ ಮರುಗಿತು

ಅವರ ಹಡದೀ ಜನುಮ

ಸಾರ್ಥಕವ ಕಂಡಿತು


ಇಂದು


ವರುಷಗಳುರಿಳಿದವು

ದಶಕಗಳು ಮರಳಿದವು

ವಿಜ್ಞಾನ ಯುಗದೊಳು

ತಂತ್ರಜ್ಞಾನ ಮೆರೆಯಿತು

ಕೂಗಿಕರೆದವೆನ್ನ ಮಕ್ಕಳ

ಎನಗೆ ಬೆನ್ನ ಹಾಕಿ ಹೊರಟರು

ತಾಯ ಮೊರೆಯ ಮರೆತರು

ನನ್ನ ಹಸಿರುಡಿಗೆಯಲಿ

ರಕುತದೋಕುಳಿಯ ಕೆನ್ನೀರು

ಮತ್ತೆ ಹರಡುತಿದೆ

ನನ್ನುಳಿವಿಗಾಗಿ ಹೋರಾಡಿ

ಎನ್ನ ಮಡಿಲ ಸೇರುತಿಹ

ವೀರ ಪುತ್ರರ ಕಂಡು

ಮಿಡಿಯುತಿಹುದೆನ್ನಹೆತ್ತೊಡಲು

ಎಪ್ಪತರ ಹರೆಯ ನನಗೆ

ಮತ್ತೊಮ್ಮೆ ಕಾಡುತಿಹುದು

ಪರರ ಸಂಕೋಲೆಯ ಭಯ

ನೂಕದಿರೆನ್ನ ಮಗದೊಮ್ಮೆ

ಪರರ ಸರಪಳಿಯೊಳಗೆ





ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics