STORYMIRROR

Achala B.Henly

Abstract Classics Inspirational

3  

Achala B.Henly

Abstract Classics Inspirational

ಸ್ವತಂತ್ರ ಪಕ್ಷಿ

ಸ್ವತಂತ್ರ ಪಕ್ಷಿ

1 min
201


ಹೇಳುವುದಕ್ಕೆ ಅವಳು ಪ್ರಸಿದ್ಧ ಬ್ಯಾಂಕಿನ ಗುಮಾಸ್ತೆ. ಸರ್ಕಾರಿ ಕೆಲಸ. ಕೈ ತುಂಬಾ ಸಂಬಳ. ಬುದ್ಧಿವಂತೆ ಮತ್ತು ರೂಪವಂತೆ. ಆದರೆ ಮನೆಯಲ್ಲಿ ಅವಳಿಗೆ ಕಿಂಚಿತ್ತೂ ಪ್ರೀತಿ, ಗೌರವ, ನೆಮ್ಮದಿ ಎಂಬುದಿಲ್ಲ. ಕತ್ತೆ ದುಡಿತ ಎನ್ನುತ್ತಾರಲ್ಲ ಹಾಗೆ! ದಿನನಿತ್ಯವೂ ಆಫೀಸು ಮತ್ತು ಮನೆಯಲ್ಲಿ ಬಿಡುವಿಲ್ಲದ ಕೆಲಸ ಅವಳಿಗೆ. ಅತ್ತೆ-ಮಾವ, ಗಂಡನಿಂದ ಯಾವುದೇ ಸಹಾಯ ಇಲ್ಲಿಯವರೆಗೂ ದೊರೆತಿಲ್ಲ. ಮದುವೆಯಾಗಿ ಐದು ವರ್ಷವಾಯಿತು, ಇನ್ನೂ ತಾಯಿಯಾಗಿಲ್ಲ ಎಂಬ ಮೂದಲಿಕೆ ಬೇರೆ ಕೇಳಬೇಕು ಆಕೆ! ತನಗೆ ಬಂದ ಪ್ರತಿ ತಿಂಗಳ ಸಂಬಳವನ್ನು ತನ್ನ ಗಂಡನಿಗೆ ಕೊಟ್ಟು, ತನ್ನದಲ್ಲದ ತಪ್ಪಿಗೆ ಬಂಜೆ ಎಂದೆನಿಸಿಕೊಂಡು, ಆಫೀಸಿನಲ್ಲೂ ದುಡಿದು, ಮನೆಯಲ್ಲಿಯೂ ಚಾಕರಿ ಮಾಡುವುದು, ಅವಳಿಗೇಕೋ ದಾಸ್ಯಕ್ಕೆ ಸಮ ಎಂತೆನಿಸುತ್ತಿದೆ.


ಇನ್ನು ಈ ಕಷ್ಟಕ್ಕೆ ಪರಿಹಾರವೇ ಇಲ್ಲ ಎಂದರಿತಾಗ ತನ್ನ ಅತ್ತೆ ಮನೆಯಿಂದ ಹೊರ ನಡೆಯುವುದೇ ಸರಿ ಎಂದೆನಿಸಿತವಳಿಗೆ. ದಾಸ್ಯದ ಸಂಕೋಲೆಯನ್ನು ಕಳಚಿ, ಸ್ವತಂತ್ರ ಪಕ್ಷಿಯಂತೆ ಹಾರಬೇಕು ಎಂಬ ತುಡಿತ ಹೆಚ್ಚಾಯಿತು ಆಕೆಗೆ! ಅಂತೂ ಒಂದು ದಿನ ಧೈರ್ಯವಹಿಸಿ, ಪ್ರೀತಿ ಗೌರವ ದಕ್ಕದ ಆ ಮನೆಯಿಂದ ಹೊರಬಂದಳಾಕೆ. ಈಗ ಸ್ವತಂತ್ರಳಾಗಿ ಜೀವನ ಸಾಗಿಸುತ್ತಿದ್ದಾಳೆ. ಆರ್ಥಿಕ ಸ್ವಾವಲಂಬನೆ ಅವಳಿಗೆ ಬದುಕಲು ದಾರಿ ತೋರಿಸಿದೆ. ಹಿರಿಯರ ಮಾತು, ಪುಸ್ತಕ, ಬರವಣಿಗೆ, ಸಂಗೀತ ಅವಳಿಗೆ ನೈತಿಕ ಸ್ಥೈರ್ಯ ತುಂಬುತ್ತಿದೆ..!!


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Abstract