ಕೃಷ್ಣ ಕುಟೀರ ಭಾಗ-14 ಸುರೇಂದ್ರನ ಲವ್ ಸ್ಟೋರಿ
ಕೃಷ್ಣ ಕುಟೀರ ಭಾಗ-14 ಸುರೇಂದ್ರನ ಲವ್ ಸ್ಟೋರಿ
ಕೃಷ್ಣ ಕುಟೀರ ಮನೆಯಲ್ಲಿ ಇಷ್ಟೆಲ್ಲ ದುರಂತವಾದರೂ ತನಗೆ ಏನು ಸಂಬಂಧ ಇಲ್ಲದ ಹಾಗೆ ಸುರೇಂದ್ರನು ಇದ್ದನು ತನ್ನ ತಾತನ ಸಾವು ಆಗಲಿ ತನ್ನ ಅಪ್ಪನ ಯಾತನೆಯಾಗಲಿ ಆತನಿಗೆ ಯಾವುದು ಕಾಣಿಸಿಕೊಳ್ಳಲಿಲ್ಲ ಅವನು ತನ್ನ ಲೋಕದಲ್ಲೇ ಇದ್ದನು ಆತನಿಗೆ ಮೊಬೈಲ್ ಬಿಟ್ರಿ ಕ್ರಿಕೆಟ್, ಕ್ರಿಕೆಟ್ ಬಿಟ್ಟರೆ ಮೊಬೈಲ್ ಅದೇ ಅವನ ಪ್ರಪಂಚವಾಗಿತ್ತು ಇಡೀ ವೈಕುಂಠ ಪುರದಲ್ಲಿ ಅತಿ ಬೇಜವಾಬ್ದಾರ ಮನುಷ್ಯನಾಗಿದ್ದನು.
ಅಂದು ನಿಂಗಿ ತನಗೆ ಪತ್ರದ ಮೇಲೆ ಸಹಿ ತೆಗೆದುಕೊಳ್ಳಲು ಆಗದರಿಂದ ಹೆದರಿ ಇನ್ನು ವಿಜಯೇಂದ್ರ ತನಗೆ ಕೇಡು ಮಾಡಬಹುದೆಂದು ಆಕೆ ಸೀದಾ ವಿಜಯೇಂದ್ರ ನ ಮನೆಗೆ ಹೋದಳು ಅವಳನ್ನ ಅಲ್ಲಿ ನೋಡಿದ ವಿಜಯೇಂದ್ರ
ವಿಜೇಂದ್ರ : welcome, welcome ನಿಂಗಿ ಅಗ್ರಿಮೆಂಟ್ ಮೇಲೆ ಸಹಿ ತಕೊಂಡ್ ಆಯ್ತಾ
ನಿಂಗಿ : ಇಲ್ಲ ಆ ಶೇಷ ಅಡ್ಡ ಬಂದ
ವಿಜಯೇಂದ್ರ : ಹಾಗಾದರೆ ಅಷ್ಟು ಆತ್ಮವಿಶ್ವಾಸದಲ್ಲಿ ವಿಶ್ವನಾಥನನ್ನು ಮುಗಿಸಿದರೆ ಸಹಿ ತರ್ತೀನಿ ಅಂತ ಹೇಳಿದ್ದೆ ಈಗ ಏನು ಆ ಶೇಷನನ್ನು ಮುಗಿಸಬೇಕಾ
ನಿಂಗಿ : ನಂಗೇನು ಅದೇ ಲೇಸು ಅಂತ ಅನಿಸುತ್ತದೆ ಅವನಿರುವರೆಗೆ ಸಹಿ ತರಲು ಸಾಧ್ಯವೇ ಇಲ್ಲ
ಜಯಂದ್ರ : ಹೌದು ಸರ್ ಆ ಶೇಷನಿಗೆ ಒಂದು ಗತಿ ಕಾಣಿಸಲೇಬೇಕು ಅವನು ಕೊಟ್ಟ ಏಟು ನಾನು ಇನ್ನು ಮರೆಯಲಿಲ್ಲ
ವಿಜಯೇಂದ್ರ ಆತನನ್ನು ಮುಗಿಸುವುದು ಏನು ದೊಡ್ಡದಲ್ಲ ಆದರೆ ಆತನನ್ನು ಮುಗಿಸಿ ಕೂಡ ನಿಂಗಿ ಜಗನ್ನಾಥ ಕುಟುಂಬದ ಹತ್ತಿರ ಸಹಿ ತರ್ತಾಳೆ ಅಂತ ಏನು ಗ್ಯಾರಂಟಿ ನನಗೆ ಇನ್ನೂ ಇವಳ ಮೇಲೆ ನಂಬಿಕೆ ಇಲ್ಲ ಇದಕ್ಕೆ ನಾವೇ ಏನಾದರೂ ದಾರಿ ಕಂಡುಕೊಳ್ಳಬೇಕು.
ನಿಂಗಿ : ಇಲ್ಲ ಸಾಹೇಬರೇ ಶೇಷ ಬಿಟ್ಟರೆ ನನಗೆ ಬೇರೆ ಯಾರು ಅಡ್ಡಿ ಇಲ್ಲ
ವಿಜಯೇಂದ್ರ : ಜಯಂದ್ರ ನೀನು ಹೇಳಿದೆ ಜಗನ್ನಾಥನಿಗೆ ಇಬ್ಬರು ಮಕ್ಕಳು ಅಂತ ಯಾಕೆ ಶೇಷ ಹೋದರೆ ಇನ್ನೊಬ್ಬ ಇದಕ್ಕೆ ಅಡ್ಡ ಬರಲ್ವಾ
ನಿಂಗಿ : ಯಾರು ಆ ಸುರೇಂದ್ರನ ಅವನು ಒಬ್ಬ ಆಪ್ರಯೋಜಕ ಅವನಿಂದ ನಮಗೆ ಏನು ತೊಂದರೆ ಆಗದು
ವಿಜಯೇಂದ್ರ : ಈಗ ಏನು ನೀನು ಅವನನ್ನು ಆಪ್ರಯೋಜಕ ಎಂದು ಹೇಳುತ್ತಿದ್ದೆ ಆದರೆ ತನ್ನ ಅಣ್ಣ ಸತ್ತ ಮೇಲೆ ಆತನಿಗೆ ಜವಾಬ್ದಾರಿ ಬರಬಹುದು ಆಗ ನಮಗೆ ಅವನೇ ದೊಡ್ಡ ತಲೆನೋವು ಆಗಬಹುದು ಎಷ್ಟಾದರೂ ಅದು ಕೃಷ್ಣ ಕುಟೀರ ವಂಶದ ರಕ್ತ .
ನಿಂಗಿ : ಆ ದಡ್ಡ ಮುಂಡೆದುಗೆ ಅದೆಲ್ಲ ತಿಳಿಯಲ್ಲಾ , ಅವನಿಗೆ ಈ ಮೊಬೈಲಲ್ಲಿ ಚಂದ, ಚಂದ ಹುಡುಗಿಯರ ಫೋಟೋ ನೋಡುವುದು
ವಿಜೇಂದ್ರ : strange ಅಣ್ಣ ನೋಡಿದರೆ rough and tough and smart guy ಆದರೆ ತಮ್ಮ ಹೀಗೆ
ಜಯೇಂದ್ರ : ಸಾರ್ ನಿಮ್ಮೊಟ್ಟಿಗೆ ಸೇರಿ ನಾನು ಕೂಡ ನಿಮ್ಮಂತೆ ಬುದ್ಧಿವಂತನಾಗಿದ್ದೀನಿ ಈಗ ಈ ಶೇಷ ಮತ್ತು ಸುರೇಂದ್ರನಿಗೆ ನಾನೇ ಒಂದು ಗತಿ ಕಾಣಿಸ್ತೀನಿ
ವಿಜಯೇಂದ್ರ : ಹೌದಾ ಏನು ನಿನ್ನ ಪ್ಲಾನ್
ಜಯಂದ್ರ ವಿಜೇಂದ್ರನನ್ನು ಪಕ್ಕಕೆ ಕರ್ಕೊಂಡು ಹೋಗಿ ತನ್ನ ಪ್ಲಾನ್ ಹೇಳಿದನು
ವಿಜಯೇಂದ್ರ : ಪ್ರಯತ್ನ ಮಾಡಿ ನೋಡು ಎಲ್ಲಾದರೂ ಈ ಪ್ಲಾನ್ ಸಕ್ಸಸ್ ಆದರೆ ನಾನು ನಿನ್ನ ಅಣ್ಣ ಅಂತ ಕರೀತೀನಿ
ಜಯಂದ್ರ : ನಗುತ್ತಾ ಆಯ್ತು ಸರ್
ಜಯಂದ್ರ ತನ್ನ ಫೋನನ್ನು ತೆಗೆದು ಸಕ್ಕು ಬಾಯಿಗೆ ಕಾಲ್ ಮಾಡಿದ
ಸಕ್ಕುಬಾಯಿ ದಂಧೆಯನ್ನು ನಡೆಸುತ್ತಿದ್ದಳು
ಜಯಂದ್ರ ಮತ್ತು ವಿಜಯೇಂದ್ರ ಅವಗವಾಗ ಅವಳ ಸ್ಥಳಕ್ಕೆ ಭೇಟಿ ನೀಡುತ್ತಿದ್ದರು
ಜಯಂದ್ರ: ಸಕ್ಕು ಬಾಯ್ ನನಗೆ ಒಂದು ಹುಡುಗಿ ಬೇಕಿತ್ತು
ಸಕ್ಕು ಬಾಯ್ : ಯಾಕೆ ಜಯಂದ್ರ ಸರ್ ಈಗ ನಮ್ಮ ಮತ್ತು ನಮ್ಮ ಹುಡುಗಿಯರ ಮೇಲೆ ನಿಮ್ಮ ಮನಸ್ಸು ಬತ್ತಿ ಹೋಯಿತಾ.
ಜಯಂದ್ರ : ಇಲ್ಲ ಸಕ್ಕೂಬಾಯಿ ನೀನ್ನ ಮೇಲೆ ಮನಸು ಬತ್ತಿ ಹೋಗುವುದು ಉಂಟೆ
ಸಕ್ಕುಬಾಯಿ : ಆಯ್ತು ಜಯಂದ್ರ ಸರ್ ನಾನು ಆ ಹುಡುಗಿಯನ್ನು ಕರ್ಕೊಂಡು ಬಂದು ನಿಮ್ಮತ್ರ ಬಿಟ್ಟು ಹೋಗ್ತೀನಿ
ಮರುದಿನ ಸಕ್ಕು ಬಾಯ್ ತನ್ನೊಂದಿಗೆ ಒಬ್ಬಳು ಸುಂದರ ಹುಡುಗಿಯನ್ನು ಕರ್ಕೊಂಡು ಬಂದಿದ್ಲು ಆಕೆ ನೋಡಲು ಸುಂದರ ಬೊಂಬೆ ತರ ಇದ್ದಳು
ಜಯಂದ್ರ : ಏನ್ ಸಕು ಬಾಯ್ ಹುಡುಗಿ ನೋಡಲು ನೀನು ಹೇಳಿದ ಹಾಗೆ ದಂತದ ಗೊಂಬೆ
ವಿಜಯೇಂದ್ರ :yes she is really beautiful
ಜಯಂದ್ರ : ನೋಡಲು ಒಳ್ಳೆಯ ರಂಭ ತರಾನೇ ಇದ್ದಾಳೆ,
ರಂಭ : ಕೆಲಸ ಏನು ನನಗೆ ತಿಳಿದಿದೆ ಅದಕ್ಕೆ ನೀವು ನನಗೆ 1 ಲಕ್ಷ ಕೊಡುತ್ತೀರಿ ಅಂತ ಸಕ್ಕುಬಾಯಿ ಹೇಳಿದ್ದಾಳೆ
ಜಯಂದ್ರ : ಏನು ಸಕ್ಕು ಬಾಯ್
ಸಕ್ಕೂಬಾಯಿ : ಎಷ್ಟಾದರೂ ನಾನು ಆಯ್ಕೆ ಮಾಡಿದ ಹುಡುಗಿ
ವಿಜಯೇಂದ್ರ : ಆ ಸುರೇಂದ್ರ ನನ್ನ ಪಟಾಯಿಸುವಾಗ ಈ ರಂಬ ಹೆಸರೆಲ್ಲ ನಡೆಯಲ್ಲ ನಿನಗೆ ಏನಾದರೂ ಹೊಸ ಹೆಸರು ಇಡಬೇಕು ನಿನ್ನೆಸರು ಇವತ್ತಿಂದ ಸೌಜನ್ಯ
ಜಯಂದ್ರ : ಸುರೇಂದ್ರ ಮತ್ತು ಸೌಜನ್ಯ ಒಳ್ಳೆ ಜೋಡಿ ಹ ಹ
ಮರುದಿನ ಸುರೇಂದ್ರನು ತನ್ನ ಗೆಳೆಯರ ಜೊತೆ ಕ್ರಿಕೆಟ ಆಟ ಆಡುತ್ತಿರುವಾಗ ಸೌಜನ್ಯ ಗ್ರೌಂಡ್ ಹೊರಗಡೆ ಬಂದು ನಿಂತಳು ಹಾಗೂ ಸುರೇಂದ್ರನನ್ನೇ ಗುರಾಯಿಸಲು ಪ್ರಾರಂಭಿಸಿದಳು
