ಕಾಡುವ ಕಂದನ ನೆನಪು..!!
ಕಾಡುವ ಕಂದನ ನೆನಪು..!!
ಸಂತೆಯಲ್ಲಿ ಕಳೆದುಹೋದ ತನ್ನ ಕಂದನ ನೆನಪು ಕಾಡಿತ್ತು ಇಂದು ಅವಳಿಗೆ. ಕಾರಣ ಅವಳ ಮಗಳಿನ್ನಷ್ಟೇ ವಯಸ್ಸಿರಬಹುದಾದ ಮುದ್ದಾದ ಹೆಣ್ಣು ಮಗಳೊಬ್ಬಳು ಇಂದು ಅವಳ ಮುಂದೆ ನಿಂತಿದ್ದಳು. ಕಾಲೇಜಿಗೆ ಸೇರಲು ಬಂದ ಆ ಹುಡುಗಿ ಇವಳಲ್ಲಿಯೇ ಬಂದು ಫೀಸು, ಅಂಕಪಟ್ಟಿ ಮುಂತಾದವುಗಳ ಬಗ್ಗೆ ವಿಚಾರಿಸುತ್ತಿದ್ದಳು. ಎಲ್ಲೋ ಅವಳಿಗೂ ಒಂದು ಆಸೆ, ಈಕೆಯೇ ತನ್ನ ಮಗಳಾಗಿರಬಹುದೇ ಎಂದು..?! ಆದರೆ ಹೇಗೆಂದು ಕೇಳುವುದು..? ಕೊನೆಗೂ ಆ ಒಂದು ಅವಕಾಶ ಒದಗಿ ಬಂತು. ತನ್ನ ಕಳೆದುಹೋದ ಪುಟ್ಟ ಕಂದನ ಹಣೆಯ ಮೇಲೆ ಇದ್ದ ಮಚ್ಚೆಯ ಗುರುತು ಇವಳಲ್ಲಿಯೂ ಇರಬಹುದೇನೋ..!! ಇದ್ದರೆ, ಇವಳೇ ತನ್ನ ಮುದ್ದು ಕಂದ. ಆದರೆ, ಹಣೆಯ ಮೇಲೆ ಬಿದ್ದ ಮುಂಗುರುಳನ್ನು ಈ ಹುಡುಗಿ ಬೇಗ ಸರಿಸಬಾರದೇ..? "ದೇವರೇ, ಇನ್ನೈದೇ ನಿಮಿಷಗಳಲ್ಲಿ ಇವರ ಕೆಲಸ ಮುಗಿದು ಹೋಗುತ್ತದೆ. ಈ ಹುಡುಗಿ ತನ್ನ ಕೂದಲನ್ನು ಸರಿಸುವ ಹಾಗೇ ಮಾಡಪ್ಪ..!!" ಎಂದುಕೊಂಡಳಾಕೆ. ಅಂತೂ ದೇವರಿಗೆ ಅವಳ ಮೊರೆ ಕೇಳಿಸಿತು. ನಾಜೂಕಾಗಿ ಆ ಹುಡುಗಿ ಕೂದಲನ್ನು ಸರಿಸಿದಾಗ ಗೊತ್ತಾಯಿತು ಇವಳಿಗೆ, ಆಕೆ ಖಂಡಿತ ತನ್ನ ಮಗಳಲ್ಲ ಎಂದು..!!
