Raghunandan S

Classics Inspirational Others

4  

Raghunandan S

Classics Inspirational Others

ದೇವರ ಮನೆ

ದೇವರ ಮನೆ

1 min
658


ಬೆಳಿಗ್ಗೆ ವಾಕಿಂಗ್ ಮುಗಿಸಿ ಮನೆಗೆ ಹೋಗೋ ದಾರಿಯಲ್ಲಿ ಪರಿಚಯದವರ ಮನೆ ಮುಂದೆ ಹೊಸ ಫಲಕ ಕಾಣಿಸಿತು. ಅರೆರೆ, ಇದೇನು "ದೇವರ ಮನೆ" ಅಂತ ಬರೆಸಿದ್ದಾರಲ್ಲ ಎಂದು ಕುತೂಹಲ ಮೂಡಿತು. ಮನೆಯಾತ ಪರಿಚಯದವರೇ ಆದ್ದರಿಂದ ಸಲುಗೆಯಿಂದ "ಏನು ಸಾರ್ ಹೊಸ ಬೋರ್ಡು" ಎನ್ನುತ್ತಾ ಮನೆಯೊಳಗೆ ಹೋದೆ. "ಎಲ್ಲ ನನ್ನ ಮಗಳ ಕೆಲಸ ನೋಡಿ" ಎಂದ ಮನೆಯಾತ "ನಿಮಗೆ ಗೊತ್ತು ನನ್ನ ಹೆಸರು ದೇವರಾಜು, ಮನೆಯಾಕೆ ವರಲಕ್ಷ್ಮಿ ಮತ್ತು ಮಗಳು ರಮಿತಾ, ಮೂವರ ಹೆಸರ ಮೊದಲಕ್ಷರ ತೆಗೆದು ಈ ನಾಮ ಫಲಕ ಮಾಡಿಸಿದಾಳೆ" ಎಂದು ನಕ್ಕರು.


ಅವರ ಮಾತು ಕೇಳುತ್ತೀರುವಾಗ, "ದೇವರು ಪ್ರತ್ಯಕ್ಷವಾಗಿ ಮೂರೂ ವರ ನೀಡಿದರೆ" ಎಂಬ ಕಥಾವಸ್ತು ನೆನಪಿಗೆ ಬಂತು ಅದನ್ನೇ ಆತನಿಗೆ ಹೇಳಿದೆ. ಅದಕ್ಕೆ ಅವರು "ಕಥೆಯ ವಿಷಯ ಇರಲಿ, ನಿಜಕ್ಕೂ ಕೇಳೋ ಹಾಗಿದ್ರೆ ಏನು ಕೇಳುತ್ತೀರಿ" ಎಂದರು. "ಅಯ್ಯೋ, ಮೂರೂ ವರ ಬೇಡ ಸಾರ್, ಒಂದು ವಧು ಸಾಕು ನನಗೆ" ಹೀಗಂದೆ. "ನಾನು ಕೇಳಬೇಕು ಅಂತಲೇ ಇದ್ದೆ, ಯಾಕೆ ಇಷ್ಟು ವಯಸ್ಸಾದ್ರೂ ಮದ್ವೆ ಆಗಿಲ್ಲ" ಎಂದರು. "ಸರಿಯಾಗಿ ಸಂಪಾದನೆ ಇಲ್ಲದವನಿಗೆ ಯಾರು ಹೆಣ್ಣು ಕೊಡ್ತಾರೆ ಸಾರ್, ಹೀಗಾಗಿ ಇಷ್ಟು ವರ್ಷ ಹುಡುಕೋದೇ ಆಯಿತು" ಹೇಳಿದೆ. ಆತ "ನಿಜ ನೋಡಿ, ಉತ್ತಮ ಆದಾಯದ ಉದ್ಯೋಗ ಸಿಗೋದು ಬಹಳ ಕಷ್ಟ ಈಗ" ಎಂದರು. "ನಮ್ಮಲ್ಲಿ ಇತ್ತೀಚಿಗೆ ಜಾಬ್ ಪೋಸ್ಟಿಂಗ್ ಇತ್ತು, ನಿಮ್ಮ ರೇಸುಮೆ ಕಳಿಸಿ ನೋಡೋಣ" ಎಂದರು. "ಅಷ್ಟಾದ್ರೆ ಬಹಳ ಸಹಾಯ ಆಗುತ್ತೆ ಸಾರ್, ಉತ್ತಮ ಆದಾಯ ಸಿಕ್ರೆ ಎಷ್ಟೋ ಸಮಸ್ಯೆ ಪರಿಹಾರ ಆಗಿ ಮನಶಾಂತಿ ಸಿಗುತ್ತೆ" ಎಂದಾಗ ಆತನು "ಜೀವನದಲ್ಲಿ ಮನಶಾಂತಿ ಮುಖ್ಯ" ಎಂದರು. ಇನ್ನೇನು ಹೋರಡಬೇಕು, ಆಗ "ಒಟ್ಟು ಮೂರೂ ವರ ಆಯ್ತಲ್ಲ ಇವರೇ ನೋಡಿ" ಎಂದರು. ನಿಜ ಉತ್ತಮ ಆದಾಯ, ಅರಿತು ನಡೆಯುವ ಸಂಗಾತಿ, ನೆಮ್ಮದಿ ಇವೆಲ್ಲ ಸರ್ವಜ್ಞನ ವಚನ ನೆನೆಪಿಸಿತು. ದೇವರು ಯಾವ ರೂಪದಲ್ಲಿ ಬೇಕಾದರೂ ಬರಬಹುದು ಅನ್ನಿಸಿತು.


ಓದುಗರೇ, ನಿಮಗೆ ದೇವರು ಈ ರೀತಿ ಎಷ್ಟು ಸಲ ಕಂಡು ಬಂದಿತ್ತು ಹೇಳುತ್ತೀರಾ.


Rate this content
Log in

Similar kannada story from Classics