ಅವಳು ಊರ್ಮಿಳೆ
ಅವಳು ಊರ್ಮಿಳೆ
ರಾಮಾಯಣವು ಭಾರತದ ಪ್ರಮುಖ ಮಹಾಕಾವ್ಯಗಳಲ್ಲೊಂದಾಗಿದ್ದು ಅನೇಕ ಪ್ರಮುಖ ಪಾತ್ರಗಳ ಪರಿಚಯವು ನಮಗಿದೆ...
ಆದರೆ ,ರಾಮಾಯಣ- ಮಹಾಭಾರತಕ್ಕೆ ಕಾರಣಕರ್ತರಾದ ಅನೇಕ ಮಹನೀಯರು ನಮ್ಮ ಅರಿವಿಗೆ ಬರದೆ ಇರುವುದು ವಿಷಾಧಕರ ವಿಷಯ.
ಇಂತಹವರಲ್ಲಿ 'ಊರ್ಮಿಳೆ' ಕೂಡ ಒಬ್ಬಳು............
ನಮಗೆಲ್ಲರಿಗೂ ತಿಳಿದಿರುವಂತೆ ; ಅಯೋಧ್ಯಾ ರಾಜಕುಮಾರರೂ,ದಶರಥ ಪುತ್ರರೂ ಆದ
ರಾಮ-ಲಕ್ಷ್ಮಣರು ಋಷಿ ವಿಶ್ವಾಮಿತ್ರರ ಸಹಾಯದಿಂದ ಮಿಥಿಲೆಯ ರಾಜ ಜನಕನ ಅರಮನೆಯಲ್ಲಿ ಆಯೋಜಿಸಿದ್ದ ಸ್ವಯಂವರದಲ್ಲಿ ಪಾಲ್ಗೊಂಡರು...
ಜನಕನು 'ಶಿವ ಧನಸ್ಸ'ನ್ನು ಮುರಿದ ರಾಮನಿಗೆ ಅತಿಲೋಕ ಸುಂದರಿ ಸೀತೆಯನ್ನು ವಿವಾಹ ಮಾಡಿಕೊಟ್ಟರೆ,ಸೀತೆಯ ಕಿರಿ ಸಹೋದರಿ ಸೀತೆಯಂತೆಯೇ ಸುರದ್ರೂಪಿಯಾದ ಊರ್ಮಿಳೆಯನ್ನು ಲಕ್ಷ್ಮಣನಿಗೆ ಮದುವೆ ಮಾಡಿಕೊಟ್ಟನು..
ಕೆಲವು ವರ್ಷಗಳ ನಂತರ ಕೈಕೇಯಿಯ ದುರಾಪೇಕ್ಷೆಯಿಂದ ದಶರಥ ಮಹಾರಾಜನು ಒಲ್ಲದ ಮನಸ್ಸಿನಿಂದ ರಾಮನನ್ನು14 ವರುಷ ವನವಾಸಕ್ಕೆ ಕಳುಹಿಸಬೇಕಾಯಿತು....
ಪತಿವೃತೆಯಾದ ಸೀತೆಯು ರಾಮನ ಜೊತೆ ಹೊರಟಳು..
ಲಕ್ಷ್ಮಣನು ಅಣ್ಣ-ಅತ್ತಿಗೆಯರಿಲ್ಲದ ಅರಮನೆಯು ತನಗೂ ಬೇಡವೆಂದು ರಾಮನ ನೆರಳಿನಂತೆ ಹಿಂಬಾಲಿಸಿದನು...
ಹಾಗೆ ಹೊರಡುವಾಗ ಅವನಿಗಾಗಿ ಸದಾಕಾಲ ಹಂಬಲಿಸುವ ಅವನ ಪ್ರಿಯ ಪತ್ನಿ ಊರ್ಮಿಳೆಯ ಯೋಚನೆಯೂ ಅವನಿಗೆ ಬರಲಿಲ್ಲ....
ಸರಿ,ಕಾವಿ ವಸ್ತ್ರ ತೊಟ್ಟು ವನವಾಸಕ್ಕೆ ಹೊರಟ ರಾಮ-ಲಕ್ಷ್ಮಣ,ಜಾನಕಿಯರನ್ನು ಅರಮನೆಯ ಪರಿವಾರದವರೂ,
ಸಮಸ್ತ ಪ್ರಜೆಗಳು ಕಣ್ಣೀರಿನೊಂದಿಗೆ ಬೀಳ್ಕೊಟ್ಟರು..ಊರ ಹೊರಗಿದ್ದ ಭರತ-ಶತೃಘ್ನರಿಗಾಗಲೀ ,ಅಂತಃಪುರದಲ್ಲಿದ್ದ ಊರ್ಮಿಳೆಗಾಗಲೀ ಅಯೊಧ್ಯೆಯ ಮೂರು ಮಹಾಮಣಿಗಳು ವನವಾಸಕ್ಕೆ ತೆರಳಿದ ವಿಷಯವು ತಿಳಿಯದು......
ಸುಧ್ಧಿ ಅಂತಃಪುರಕ್ಕೆ ತಲುಪಿತು..
ದುಖ:ತಪ್ತಳಾದ ಊರ್ಮಿಳೆಯು ಓಡುತ್ತಾ ಅರಮನೆಯ ಮಹಾದ್ವಾರದ ಬಳಿ ಬಂದಳು...
ಪ್ರಿಯಸಖ ಲಕ್ಷ್ಮಣನಿಗಾಗಿ ಅತ್ತಳು,ರೋಧಿಸಿದಳು,ದ್ವಾರದ ಬಳಿಯೇ ಕುಸಿದು ಬಿದ್ದಳು.......
ಇತ್ತ ಸುಧ್ಧಿ ಭರತ-ಶತೃಘ್ನರಿಗೂ ತಿಳಿಯಿತು...
ಭರತನು ಕೈಕೇಯಿಯ ಮಾತನ್ನು ಲೆಕ್ಕಿಸದೆ ವನವಾಸಕ್ಕೆ ಹೋದ ರಾಮ-ಲಕ್ಷ್ಮಣ,ಸೀತೆಯನ್ನು ಕರೆತರುವೆನೆಂದು ಹೊರಟನು...ಊರ್ಮಿಳೆ ಎಲ್ಲಾ ದೇವರಲ್ಲಿ ಪ್ರಾರ್ಥಿಸಿದಳು,ಮತ್ತೊಮ್ಮೆ ಲಕ್ಷ್ಮಣನನ್ನು ನೋಡುವ ತವಕ ಅವಳಿಗೆ....
ಭರತನು ರಾಮನ ಪಾದುಕೆಯಂದಿಗೆ ಮರಳಿದಾಗ ಊರ್ಮಿಳೆಗೆ ಮತ್ತೊಮ್ಮೆ ನಿರಾಸೆ...
ಲಕ್ಷ್ಮಣನು 14 ವರುಷ ಬರುವುದಿಲ್ಲ ಎನ್ನುವುದು ಅರಗಿಸಿ ಕೊಳ್ಳಲಾಗದ ಕಹಿ ಸತ್ಯವೆಂದು, ಅವನ ಯೋಚನೆಯಲ್ಲಿಯೇ ದಿನ ದೂಡುತ್ತಿದ್ದಳು........
ವನ-ವಾಸ ಆರಂಭಿಸಿದ್ದ ರಾಮನು ಋಷಿ ವಸಿಸ್ಟರ ಸಲಹೆಯಂತೆ ದಂಡಕಾರಣ್ಯದಲ್ಲಿ ತನ್ನ ಪತ್ನಿ ಹಾಗೂ ತಮ್ಮನೊಡನೆ ಪರ್ಣಕುಟೀರವನ್ನು ನಿರ್ಮಿಸಿಕೊಂಡನು...
ರಾತ್ರಿಯಾಯಿತು.....
ದಂಡಕಾರಣ್ಯವು ಹಲವು ರಾಕ್ಷಸರ ಹಾಗೂ ಕ್ರೂರ ಮೃಗಗಳ ತಾಣವೆಂದು ವಸಿಷ್ಟರು ಹೇಳಿದ್ದರು...
ಲಕ್ಷ್ಮಣನು ಅಣ್ಣ-ಅತ್ತಿಗೆಯರನ್ನು ಕುಟೀರದೊಳಗೆ ಮಲಗಲು ಹೇಳಿ ತಾನು ಹೊರಗಡೆ ಇದ್ದು ಕಾವಲು ಕಾಯುವುದಾಗಿ ಹೇಳಿದನು...
ಕುಟೀರದೊರಗೆ ತನಗಾಗಿ ಮಾಡಿಕೊಂಡಿದ್ದ ವಿಶ್ರಾಂತಿ ಸ್ಥಳದಲ್ಲಿ ಕುಳಿತು ಕಾವಲು ಕಾಯತೊಡಗಿದನು...
ನಡುರಾತ್ರಿ ಸಮೀಪಿಸಿತು, ಅರಮನೆಯಿಂದ ಹೊರಟು ಊರೂರು ಸುತ್ತಿ ಕೊನೆಗೆ ದಂಡಕಾರಣ್ಯಕ್ಕೆ ಬಂದ ಅವನು ಕೊಂಚ ದಣಿದಿದ್ದನು ..ತಡರಾತ್ರಿಯಾದರೂ ನಿದ್ರಿಸದ ಲಕ್ಷ್ಮಣನ ಬಳಿ ನಿದ್ರಾದೇವಿಯೇ ಬಂದಳು..
ಲಕ್ಷ್ಮಣನು "14 ವರುಷದ ವನವಾಸದಲ್ಲಿ ತನ್ನ ಅಣ್ಣ-ಅತ್ತಿಗೆಯರ ರಕ್ಷಣೆಯ ಕಾರ್ಯವನ್ನು ಮಾಡಬೇಕಾಗಿರುವುದರಿಂದ, ನಮ್ಮ ವನವಾಸವು ಮುಗಿಯುವವರೆಗೂ ನನಗೆ ನಿದ್ರೆಯು ಬಾರದಂತೆ ವರವನ್ನು ಕರುಣಿಸು ಮಾತೆ "ಎಂದನು..
ನಿದ್ರಾದೇವಿಯು ಲಕ್ಷ್ಮಣನ ಪರಿಸ್ಥಿತಿಯನ್ನು ಅರ್ಥೈಸಿಕೊಂಡಳು...
ಆದರೆ,"ನೀನು ವನವಾಸ ಮುಗಿಸಿ ಬರುವವರೆಗೆ ನಿನ್ನ ಬದಲಿಗೆ ಬೇರೆಯಾರಾದರೂ 14 ವರುಷ ಸಂಪೂರ್ಣವಾಗಿ ನಿದ್ರಿಸಿದರೆ ಮಾತ್ರ ನಿನ್ನ ಕೋರಿಕೆಯು ಈಡೇರಲು ಸಾಧ್ಯ " ಎಂದಳು....
ಲಕ್ಷ್ಮಣನಿಗೆ ಅರಮನೆಯಲ್ಲಿದ್ದ ತನ್ನ ಪತ್ನಿ ಊರ್ಮಿಳೆಯ ಯೋಚನೆ ಈಗ ಹೊಳೆಯಿತು...
"ತನ್ನ ಬದಲಾಗಿ ನನ್ನ ಪತ್ನಿ ಊರ್ಮಿಳೆಯು 14 ವರುಷ ಸಂಪೂರ್ಣವಾಗಿ ನಿದ್ರಿಸುತ್ತಾಳೆ" ಎಂದನು ....
ನಿದ್ರಾ ದೇವಿಯು ಊರ್ಮಿಳೆಯ ಬಳಿ ಬಂದು ಲಕ್ಷ್ಮಣನ ಕೋರಿಕೆಯನ್ನು ತಿಳಿಸಿದಳು..
ಲಕ್ಷ್ಮಣನಿಗಾಗಿ ಹಂಬಲಿಸುತ್ತಿದ್ದ ಊರ್ಮಿಳೆಯು ಎಷ್ಟಾದರೂ ಪತಿವೃತೆ ಸೀತೆಯ ಸಹೋದರಿ, ಪತಿಯ ಅಪೇಕ್ಷೆಯಂತೆ ತಾನು 14 ವರುಷ ಸಂಪೂರ್ಣವಾಗಿ ನಿದ್ರಿಸಲು ಸಂತೋಷದಿಂದ ಒಪ್ಪಿದಳು.
ನಿದ್ರಾದೇವಿ ವರವನ್ನು ಕರುಣಿಸಿ ಮಾಯವಾದಳು.....
ಲಕ್ಷ್ಮಣನು ಮರಳಿ ಅಯೋಧ್ಯೆಗೆ ಬರುವವರೆಗೂ ನಿದ್ರಿಸಿದವಳು ಅವಳು..
ತನ್ನ ಅರ್ಧ ಜೀವನವನ್ನೇ ಪತಿಯ ಅಪೇಕ್ಷೆಯಂತೆ
ನಿದ್ರಿಸುತ್ತಾ ಕಳೆದವಳು ಅವಳು..
