ಪರ್ವತದ ಪರಿಸರ
ಪರ್ವತದ ಪರಿಸರ
ಎತ್ತ ತಲೆಯೆತ್ತು ನೋಡಲು
ಕಾಣುವುದು ಸುಂದರವಾದ ಪರಿಸರ
ಎತ್ತ ತಲೆಯೆತ್ತು ನೋಡಲು
ಉದಯವಾಗುತ್ತಿರುವ ನಮ್ಮ ನೇಸರ
ಬಂಡೆ ಕಲ್ಲುಗಳ ಮಧ್ಯೆ
ನಿಂತಿರುವೆ ನಾನು ಒಂಟಿಯಾಗಿ
ತಿಳಿಯುತ್ತಿಲ್ಲ ಪಯಣ
ಕೊನೆಯಾಗುವುದೋ ಇಲ್ಲೇ ಒಬ್ಬಂಟಿಯಾಗಿ
ಬೇಸರ ಕಳೆಯಲು ಬಂದೆ ನಾನು
ಕಳೆದುಹೋದೆ ನಿನ್ನಲ್ಲಿಯೇ ನಾನು
ಮರಳಿ ಸಾಗಲು ಇಷ್ಟವಿಲ್ಲ
ಹೋಗದೆ ಇರಲು ವಿಧಿ ಬಿಡುವುದಿಲ್ಲ
