STORYMIRROR

Denight writer

Inspirational

2  

Denight writer

Inspirational

ಬರಿದಾದ ಬಣ್ಣ

ಬರಿದಾದ ಬಣ್ಣ

1 min
110

ಮಿಂದೆನು ಈ ಬಣ್ಣಗಳ ಸರೋವರದಲ್ಲಿ

ಎದ್ದೇನು ಈ ನೈತಿಕತೆಯ ಜಗತ್ತಿನಲ್ಲಿ

ಎಷ್ಟು ಬಣ್ಣಗಳು ಉಂಟೋ

ಅಷ್ಟು ಬಣ್ಣಗಳ ಜನರಿದ್ದಾರೆ

ತಿಳಿಯುತ್ತಿಲ್ಲ ನನ್ನವರು ಯಾರೆಂದು

ತಿಳಿಯುತ್ತಿಲ್ಲ ನನ್ನವರು ಯಾರೆಂದು


ಏರಚಾಡುವರು ಬಣ್ಣಗಳನ್ನು ಹೋಲಿಯ ದಿನದಂದು

ಬಟ್ಟೆ ರಂಗಾಯಿತೇ ಹೊರತು ಮನಸ್ಸಲ್ಲ

ಇತರರಿಗೆ ಬಣ್ಣಗಳು ಹಚ್ಚಿದರೇನು ಬಂತು

ನಿನ್ನ ಮನಸ್ಸೇ ಕಪ್ಪು ಮಸಿಯಾಗಿದ್ದರೆ

ತಿಳಿಯುತ್ತಿಲ್ಲ ಯಾರ ಮನಸ್ಸು ಮಸಿಯಾಗಿದೆ ಎಂದು

ತಿಳಿಯುತ್ತಿಲ್ಲ ಯಾರ ಮನಸ್ಸು ಮಸಿಯಾಗಿದೆ ಎಂದು


ಅರಿತೆನು ಈ ಬಣ್ಣದ ಜಗತ್ತು ನನ್ನದಲ್ಲವೆಂದು

ಹೊರಗೆ ತಳಕು ಒಳಗೆ ಹುಳುಕು ಎಂಬ ಗಾದೆ  ನೆನಪಾಯಿತಿಂದು

ನೆನಪಿರಲಿ ನಿನ್ನ ಬಣ್ಣವು ಕಳಚುವುದು ಒಂದು ದಿನ

ಉಳಿಯುವುದು ಒಂದೇ ಅದು ನಿನ್ನ ನಿಜವಾದ ಒಳ್ಳೆಯತನ

ತಿಳಿಯುತ್ತಿಲ್ಲ ಬಣ್ಣ ಹಚ್ಚಿದವರು ಯಾರೆಂದು

ತಿಳಿಯುತ್ತಿಲ್ಲ ಬಣ್ಣ ಹಚ್ಚಿದವರು ಯಾರೆಂದು


Rate this content
Log in

Similar kannada poem from Inspirational