STORYMIRROR

JAISHREE HALLUR

Classics Inspirational Others

4  

JAISHREE HALLUR

Classics Inspirational Others

ಮಡಿಕೇರಿಯಲ್ಲೊಂದು ದಿನ

ಮಡಿಕೇರಿಯಲ್ಲೊಂದು ದಿನ

1 min
337

ಶುಭೋದಯ ಗೆಳೆಯ ಗಳತಿಯರೆ


ಮಡಿಕೇರಿಯಲೊಂದು ದಿನ

ಬೆನ್ನೇರಿ ಬಂದ ಸುದಿನ!


ತಡಕಾಡಿತೆನ್ನ ಮನ ಆ ಕ್ಷಣ

ಹಿಡಿದಿಡಲಾರದಷ್ಟು ಖುಷಿಯನ್ನು!


ಅಡಚಣೆಗಳ ಬದಿಗೊತ್ತಿ, ಬಸ್ ಹತ್ತಿದ್ದೆ

ಸಡಗರದಾ ಲೋಕಕ್ಕೆ ಪಯಣ ಕಾದಿದೆ.


ಮಿಡಿದ ಮನಸುಗಳ ಮಿಲನ

ಕಾಡಿದ ನೆನಪುಗಳ ಕವನ


ಪ್ರೇಮ ಸಕ್ಕರೆಯ ಸ್ವರ್ಗತಾನ,

ಸ್ನೇಹದೊಲವಿನ ಆತ್ಮಾವಲೋಕನ


ಭಾವಬಂಧನಕಿಲ್ಲ ಬೇಲಿ ಹಂಗು

ಮುಕ್ತಮನಸುಗಳ ಮಾತಿಗಿರಲಿಲ್ಲ ಲಂಗು.


ಸಕ್ಕರೆಯ ಅಕ್ಕರೆಯಿತ್ತು ಊಟದಲ್ಲಿ

ಎಕರೆಗಟ್ಟಲೆ ವಿಶಾಲತೆ ಹೃದಯದಲ್ಲಿ


ತುಂಬಿ ಬಂದಿತ್ತು ಹಂಬಲದೀ ಮನ

ನಂಬಿದಾಗ ಎಲ್ಲರೂ ಪ್ರೀತಿಗೆ ಪಾತ್ರರೆಂದು.


ಹಿಂದಿರುಗುವಾಗ ಮತ್ತದೇ ಚಿತ್ರಣ

ಮರೆಯಲಾಗದ ಕ್ಷಣಗಳ ಸ್ನೇಹಸಿಂಚನ.


( ಗೆಳತಿ ಸೌಮ್ಯಳ ಕುಟುಂಬದೊಡನೆ ಕಳೆದ ಆ ಒಂದು ದಿನ ಸುದಿನ, ಸುಯೋಗದ ಸುಂದರ ಕ್ಷಣವಾಗಿತ್ತು.😊👌 ಅವರಿಗೆ ಹಾಗೂ ಅವರ ಕುಟುಂಬಕ್ಕೆ ನನ್ನ ಹೃದಯ ತುಂಬಿದ ನಮನಗಳು.)


Rate this content
Log in

Similar kannada poem from Classics