ಲೋಕಲ್ ರೈಲು
ಲೋಕಲ್ ರೈಲು

1 min

23K
ಲೋಕಲ್ ರೈಲು ಲೋಕಲ್ ರೈಲು
ಭರ್ ಭರ್ ಎಂದು ಓಡುವೆ
ಧಢ ಧಢ ಶಬ್ದ ಮಾಡುವೆ
ಸ್ಟೇಷನ್ ಬಂತು ಸ್ಟೇಷನ್ ಬಂತು
ಭಂವ್ ಭಂವ್ ಎಂದು ಕೂಗುವೆ
ಪಟ ಪಟ ಜನರಿಗೆ ಇಳಿಸುವೆ
ನಿನ್ನ ಮನೆಯಲ್ಲಿ ತರತರ ಜನರು
ಏರುವರು ಕುರಿ ಹಿಂಡಾಗಿ
ನಿಲ್ಲುವರು ಖರೆ ದಂಗಾಗಿ
ಭಾರಿ ಮಳೆಯಲಿ ನಿನ್ನದೇ ಗೋಳು
ಜನರು ಕಾಯ್ವರು ನಿನ್ನದೇ ದಾರಿ
ಕೊನೆಗೆ ಹಿಡಿವರು ಮನೆಯ ದಾರಿ
ಓಡಲು ನಿನಗೆ ಬೇಸರವಿಲ್ಲಾ
ನೀನೇ ನಮ್ಮ ಜೀವನಾಡಿ
ನಮಗೆ ಇಲ್ಲ ಬೇರೆ ಗಾಡಿ