STORYMIRROR

Vaishnavi S Rao

Classics Inspirational Others

4  

Vaishnavi S Rao

Classics Inspirational Others

ಗುರು

ಗುರು

1 min
304


ನಿಮ್ಮ ತರಹ ಗುರು ಇರಬೇಕು

ಬಾಳಿನ ಪುಟವನ್ನು ತೆರೆಯಬೇಕು

ಭಕ್ತಿಮಾರ್ಗದಿಂದ ವಿದ್ಯೆ ಕಲಿಯಬೇಕು

ಅವರ ಆಶೀರ್ವಾದ ಸದಾ ಇರಬೇಕು


ಹಾಲು ಜೇನಿನಂತೆ ಗುರು ಶಿಷ್ಯರು ಇರಬೇಕು

ಶಿಷ್ಯನು ಸಮಾಜಕ್ಕೆ ಮಾದರಿಯಾಗಿರಬೇಕು

ದೀಪಕ್ಕೆ ಎಣ್ಣೆಯ ಹಾಗೆ ನೀವುಗಳು ಇರಬೇಕು

ಸಮಸ್ತ ಜನರು ಹೆಸರು ಹೇಳುವಂತೆ ಮಾಡಬೇಕು


ಎಲ್ಲಿ ನೋಡಿದರು ನಿಮ್ಮ ಹೆಸರುಗಳನ್ನು ಹೇಳುತ್ತಾರೆ

ಗುರುಗಳಿಗೆ ಗೌರವವನ್ನು ಎಲ್ಲರೂ ಸೂಚಿಸುತ್ತಾರೆ

ಗುರುಭ್ಯೋ ನಮಃ ಎಂದು ಪುರಾಣದಲ್ಲಿ ಹೇಳಿದ್ದಾರೆ

ತಾಯಿಯೇ ಮೊದಲ ದೇವರು ಎಂದು ಪೂಜಿಸುತ್ತಾರೆ


ಕಲೆಗಾರನ ಕೈಯಲ್ಲಿ ಸಾಧನೆಯ ಛಲ ಇರುತ್ತದೆ

ಗುರುವಿಗೆಮಕ್ಕಳಉನ್ನತಿಕರಿಸುವಗುರಿಯನ್ನು ಇರುತ್ತದೆ

ಜ್ಞಾನ ಭಂಡಾರವನ್ನು ಅವರ ಬಳಿಯಲ್ಲಿ ಹಾಗೆ ಇರುತ್ತದೆ

ನೀವು ನಿಜವಾಗಲೂ ದೇವರ ಅವತಾರ ಒಮ್ಮೆ ಅನಿಸುತ್ತದೆ 


ಮಕ್ಕಳ ಮುಖದಲ್ಲಿ ನಗುವ ಕಂಡು ತನ್ನ ನೋವನ್ನು ಮರೆಯುತ್ತಾರೆ

ಮಕ್ಕಳಲ್ಲಿ ಸೂಕ್ತ ಪ್ರತಿಭೆಗೆ ಕೈಜೋಡಿಸಿ ಹಾರೈಸುತ್ತಾರೆ

ಮಕ್ಕಳ ಜೊತೆಯಲ್ಲಿ ಗುರುಗಳು ನೃತ್ಯ ಮಾಡುತ್ತಾರೆ

ಮಕ್ಕಳಿಂದಲೇ ಸಾಕಷ್ಟು ಗುರುಗಳು ಕಲಿಯುತ್ತಾರೆ 



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics