ನವರಾತ್ರಿ
ನವರಾತ್ರಿ
ಕೆಂಪುಬಣ್ಣ
ಜ್ಞಾನ ಗಳಿಕೆಯ ಹಾದಿಯಲ್ಲಿ
ಅನ್ಯ ಸೆಳೆತವ ನಿಲ್ಲಿಸಿ
ಮನವ ದಾರಿಗೆ ತರುವ ಕೆಲಸದಿ
ಬ್ರಹ್ಮಚಾರಿಣಿ ದೇವಿಯು ॥
ಮನದಿ ಮಲೆಯುವ
ದುಷ್ಟ ಬುದ್ಧಿಯ ನೀಗಿ
ಸೌಖ್ಯದಿ ನಡೆಯುತ
ಜಯದ ಮಾಲೆಯ ಪಡೆಯುವ ॥
ಮನವ ಬೆಳಗುತ
ಉತ್ಸಾಹ ತುಂಬುತ
ಶುಭವ ಕೋರುತ
ಭಕ್ತಿಯಿಂದಲಿ ನಮಿಸೋಣ॥
