STORYMIRROR

Ranjitha M

Classics Inspirational Others

4  

Ranjitha M

Classics Inspirational Others

ಬಾಲ್ಯದ ಸವಿನೆನಪುಗಳ ಬುತ್ತಿ

ಬಾಲ್ಯದ ಸವಿನೆನಪುಗಳ ಬುತ್ತಿ

1 min
375

ಬಾಲ್ಯವೇ ಒಂದು ಸುಂದರ ನೆನಪು

ಅಣ್ಣತಮ್ಮರ ಜೊತೆ ಆಡಿ ಬೆಳೆದ ನೆನಪು

ಬಣ್ಣಬಣ್ಣದ ಪೆಪ್ಪರುಮೆಂಟುಗಳ ತಿನ್ನುತ

ಅಳುತ, ನಗುತ , ಬೀಳುತ ಏಳುತ ಸಾಗಿದ ನೆನಪು


ಮರ ಹತ್ತಿ ಮರಕೋತಿ ಆಡಿದ ನೆನಪು

ಬುಟ್ಟಿಗಟ್ಟಲೆ ನೇರಳೆ ಹಣ್ಣು ತಿಂದ ನೆನಪು

ದೊಡ್ಡವರು ಕೊಡುತ್ತಿದ್ದ ಹತ್ತುರುಪಾಯಿಯಲ್ಲಿ

ಹಲವಾರು ಸಿಹಿತಿಂಡಿ ಖರೀದಿಸಿ ತಿಂದ ನೆನಪು


 ಶಾಲೆಗೆ ಬೇಸಿಗೆ ರಜೆಯು ಬಂದಾಗ

ಅಣ್ಣತಮ್ಮ ಅಕ್ಕ ತಂಗಿಯರೊಡನೆ ಸೇರಿ

ಗದ್ದೆಯ ಕೆಳಗಿನ ಹಳ್ಳದಲಿ ಆಟವಾಡಿದ ನೆನಪು

ಅಡಿಕೆ ತೋಟದಲಿ ಮಂಗಗಳ ಹಾಗೆ ಕುಣಿದ ನೆನಪು


ನೆಚ್ಚಿನ ಬೆಕ್ಕು ಇಲಿಯ ಕಾರ್ಟೂನಿನ ಚಾನಲ್ಲಿಗಾಗಿ

ಟಿವಿ ರಿಮೋಟು ಕೊಡೆಂದು ಕಿತ್ತಾಡಿದ ನೆನಪು

ತಂಗಿಯ ತಿಂಡಿಯ ಮೊದಲೇ ತಿಂದು ಏನನು ಉಳಿಸದೆ

ಅವಳು ಚಾಡಿಯ ಹೇಳಲು ಮನೆಯವರಿಂದ ಪೆಟ್ಟು ತಿಂದ ನೆನಪು


ರಕ್ಷಾಬಂಧನದ ಹಬ್ಬವು ಬಂದಾಗ 

ರಂಗುರಂಗಿನ ರಾಖಿಯ ಖರೀದಿಸಿದ ನೆನಪು

ಅಣ್ಣತಮ್ಮರಿಗೆ ಬಣ್ಣದ ರಾಖಿಯ ಕಟ್ಟಿದ ನೆನಪು

ಅಗ್ರಜರು ನಮಗೆಲ್ಲ ಸಿಹಿತಿಂಡಿ ಕೊಡಿಸಿದ ನೆನಪು



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics