ಹೆಣ್ಣು
ಹೆಣ್ಣು
ನಿನ್ನಿಂದ ಭೂಮಿಗೆ ಕಾಲಿಡುವುದು ಒಂದು ಜೀವ
ನಿನ್ನಿಂದ ಜೀವನ ಮಾಡುವುದನ್ನು ಕಲಿಯುವ
ಜೀವಿಗಳು ಅನೇಕ,
ಮಗಳಾಗೆ ತಂದೆ ತಾಯಿಯಪ್ರೀತಿ ಎಂಬ ಕೋಟೆಯಲ್ಲಿ ರಾಜಕುಮಾರಿಯಂತೆ ಬೆಳೆಯುವೆ
ಎಂತಹ ಕಷ್ಟ ಬಂದರು ಧೈರ್ಯವಾಗಿ ಹಾಗು ಸಮರ್ಥಳಾಗಿ ನಿಲ್ಲುವೆ
ನೀನು ಮಾಡುವ ಎಲ್ಲಾ ಕೆಲಸಗಳು ಪರಿಪೂರ್ಣತೆ
ಹೊಂದಿರುವುದುು
ಚಿನ್ನದಂತಹ ನಿನ್ನ ಹೃದಯ ಗಾಜಿನಷ್ಟೆ ಸೂಕ್ಷ್ಮವಾಗಿರುವ ಭಾವನೆಗಳನ್ನು ಹೊಂದಿರುವುದು
ವಿಶೇಷ ಶಕ್ತಿಯನ್ನು ನೀನು ಹೊಂದಿರುವೆ
ನಂಬಿಕೆಯ ಮತ್ತೊಂದು ಅರ್ಥ ನೀನು
ಕಾಡಾಗಲಿ ನಾಡಾಗಲಿ ಅದಕ್ಕೆ ಹೊಂದ್ಕೊಳುವ ಶಕ್ತಿ
ನಿನ್ನಿಲಿದೆ
ಬರುವ ತೊಂದರೆಗಳಿಗೂ ಕೃತಜ್ಞತೆ ಸಲ್ಲಿಸುವುದು
ನೀನೊಬ್ಬಳೇ
ನೀನೇ ಹೆಣ್ಣು!