ಓ ನನ್ನ ಕನಸಿನ ರಾಣಿ
ಓ ನನ್ನ ಕನಸಿನ ರಾಣಿ


ಓ ನನ್ನ ಕನಸಿನ ರಾಣಿ
ನಿನಗಾಗಿ ಕಾದಿದೆ ನನ್ನ ಹೃದಯದ ದೋಣಿ,
ಹಿಡಿ ಕೈಯಲ್ಲಿ ಪ್ರೀತಿಯ ಚುಕ್ಕಾಣಿ
ಬಾ ಇಬ್ಬರು ಏರುವ ಮಧುಮಂಚದ ಏಣಿ.
ಓ ನನ್ನ ಪ್ರೀತಿಯ ಬಾಲೆ
ನಾ ಬರೆಯುವೆ ನಿನಗೊಂದು ಓಲೆ,
ನೀನಿಲ್ಲದೆ ನನ್ನ ಬದುಕಿಗೆಲ್ಲಿದೆ ನೆಲೆ,
ನಿನ್ನ ಹೊರತು ಇದಕ್ಕೆಲಿದೆ ಬೆಲೆ.
ಓ ನನ್ನ ಉಸಿರೇ
ನನ್ನ ಹೃದಯದ ಮೇಲೆ ಕೊರೆದಿರುವೆ ನಿನ್ನ ಹೆಸರೇ,
nter">ತಡಮಾಡದೆ ಈಗಲೇ ಬಂದು ನನ್ನನ್ನು ಸೇರೇ
ತಡವಾದರೆ ನಿಂತು ಹೋಗುತ್ತೆ ನನ್ನ ಉಸಿರೇ.
ಓ ನನ್ನ ಜಾಣೆ
ನಿನ್ನಂತಹ ಸುಂದರಿಯ ನಾನೆಲ್ಲೂ ಕಾಣೇ,
ನಿನಗಾಗಿ ಕಟ್ಟೀಸುವೆ ನಕ್ಷತ್ರಗಳ ಕೋಣೆ
ನಾ ನಿನ್ನ ಜೊತೆ ಇರಲು ದುಃಖದ ಭಯವೇಕೆ ಜಾಣೆ?
ಓ ನನ್ನ ಒಲವಿನ ಕುಸುಮ
ನಿನ್ನ ಮುಂದೆ ಉಳಿದೆಲ್ಲ ಸುಖವು ನೆಲಸಮ,
ಬಾ ಇಂದೇ ಮಾಡುವ ಪ್ರೀತಿಯ ಸಂಗಮ
ನಾನೂ ನೀನೂ ಕೂಡಿ ಬಾರಿಸುವ ನಮ್ಮ ಪ್ರೀತಿಯ ಡಿಮ