STORYMIRROR

manjula g s

Classics Inspirational Others

4  

manjula g s

Classics Inspirational Others

ನವದುರ್ಗೆಯರ ಸ್ತುತಿ

ನವದುರ್ಗೆಯರ ಸ್ತುತಿ

1 min
287

ನಮಿಸುವ ಬನ್ನಿರಿ ನವದುರ್ಗೆಯರ ನಾಡಹಬ್ಬದಿ 

ಕರುನಾಡಿನ ಸಂಸ್ಕೃತಿಯ ದೇವತೆಗಳ ಮುದದಿ!

ತ್ರಿಶೂಲ ಕಮಲವ ಕರಗಳಲಿ ಹಿಡಿದ ಅವತಾರದಿ

ಶೈಲಪುತ್ರಿಯೇ ಧಾತ್ರಿಯಾಗಿ ಸ್ಥಿರವಾದಳು ಲೋಕದಿ! 


ಘೋರ ತಪವ ಮಾಡಿ ಹೆಸರಾದ ಬ್ರಹ್ಮಚಾರಿಣಿ 

ಜಪಮಾಲೆ ಕಮಂಡಲ ಹಿಡಿದಂತಹ ಶ್ವೇತವರ್ಣಿ

ಮಮತೆ ಕ್ಷಮಾಶೀಲದ ವಾತ್ಸಲ್ಯಗಳಲಿ ರಮಣಿ 

ಚಂದ್ರಘಂಟಾ ಹೆಸರಿನಲಿ ಶಸ್ತ್ರಾಸ್ತ್ರಗಳ ಧಾರಿಣಿ! 


ಬ್ರಹ್ಮಾಂಡದ ರಚನೆಗೆ ಕಾರಣವಾದ ಮಹಾಶಕ್ತಿ 

ಪ್ರತಿ ಜೀವಿ ಛಾಯೆಯಲ್ಲಿ ಅಡಗಿರುವ ಆದಿಶಕ್ತಿ 

ಕಾರ್ತಿಕೇಯ ಮಾತೆ ಸ್ಕಂದ ಮಾತೆಯೆಂಬ ಉಕ್ತಿ

ಮಮತಾಮಯಿಯಾಗಿ ಮಾತೃ ಸ್ವರೂಪಿಗೆ ಭಕ್ತಿ! 


ಮಹಿಷಾಸುರನ ವಧಿಸಿದ ಕಾತ್ಯಾಯಿನಿ ತಾಯಿ 

ಕಾಲರಾತ್ರಿಯಲಿ ತ್ರಿನೇತ್ರಿಯಾದ ಮಹಾಮಾಯಿ

ಸರ್ವಾಂಗಾಭರಣದ ಮಹಾಗೌರಿ ವರದಾಯಿ

ಮೋಕ್ಷವ ನೀಡಲಿ ನಮಗೆ ಸಿದ್ದಿಧಾತ್ರಿಯೆ ವಿಜಯಿ! 


Rate this content
Log in

Similar kannada poem from Classics