Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Pushpa Soni

Classics Inspirational Others

3  

Pushpa Soni

Classics Inspirational Others

ನಮ್ಮಿಬ್ಬರ ಪ್ರೀತಿ -ಪ್ರೇಮ

ನಮ್ಮಿಬ್ಬರ ಪ್ರೀತಿ -ಪ್ರೇಮ

1 min
168


ನಿನ್ನ ಮುಗಳ್ನಗೆಯಲಿ

ನನ್ನ ಪ್ರೀತಿಯ ನಾ ಕಂಡಂತೆ

ನಿನ್ನೊಲವಿನ ಸವಿ ಔತಣವ

ನನ್ನೀ ಮನಸು ಉಂಡಂತೆ!!


ಕಿರುಬೆರಳ ನೆಲಕೆ ತಾಗಿಸಿ 

ನಾಚುತ ನಾಲ್ಕು ಹೆಜ್ಜೆ

ತುಸು ದೂರ ಹಾಕಿದಂತೆ

ಪ್ರೀತಿಯ ಮಳೆ ಸುರಿಯೇ!!


ಬಲಗಾಲಿಟ್ಟು ಹೃದಯದ ಕದವ

ತೆಗೆದು ನೀ ಒಳಗೆ ಬಂದಂತೆ

ಬಾಸವಾದಂತೆ ಇಂದು ಬಾಳಲಿ

ಪ್ರೀತಿಯ ಪ್ರವೇಶವಾದಂತೆ!!


ನಿನ್ನ ಭಾವನೆಗಳೆ ನನ್ನೀ 

ಬದುಕಿನ ಕವಿತೆಯ ಸಾಲಂತೆ

ನಿನ್ನೊಲವಿನ ಲೋಕವೇ 

ನಾನಿರುವ ಮನೆಯಂತೆ!!


ನಮ್ಮಲ್ಲಿ ಮೂಡಿದ ಪ್ರೀತಿ ಒಂಥರಾ 

ನಾವು ಕಳೆದು ಹೋಗುವ ವನವಂತೆ

ನಮ್ಮಿಬ್ಬರಲ್ಲಿ ಹುಟ್ಟಿದ ಈ ಪ್ರೇಮವೇ

ನಾವು ನೆಲೆಸುವ ಪ್ರೇಮಮಂದಿರವಂತೆ!!


Rate this content
Log in

Similar kannada poem from Classics