ನೀಲಿ ಕಣ್ಣೋಟ
ನೀಲಿ ಕಣ್ಣೋಟ
ನಿನ್ನ ಕಾಮಾನು ಬಿಲ್ಲಿನ ಹುಬ್ಬಿನ ನಡುವಲಿ
ಕಾರಿರುಳ ಬಣ್ಣದ ರೆಪ್ಪೆಗಳಲಿ
ಹಾಲು ಬಿಳುಪಿನ ಕೆನ್ನೆಯ ಮೇಲೆ
ಗಾಳಿಯ ಆಟಕ್ಕೆ ಮುತ್ತಿಕ್ಕುವ ಮುಂಗುರುಳಿನ ಕಚಗುಳಿಯಲಿ
ಚೆಂದುಟಿಯ ಗಾಳಿಯ ಸ್ಪರ್ಶದಲಿ
ಹಕ್ಕಿಯಂತೆ ಪಟ ಪಟ ಅಂತ ಬಡಿಯುತಲಿ
ನಿನ್ನ ನೀಲಿ ಕಣ್ಣೋಟದಲಿ
ನಾ ಸೋತು ಹೋದೆ ಚೆಲುವೆ
ಒಮ್ಮೆ ನನ್ನ ಜೀವನದಲ್ಲಿ ಬಂದ ನನ್ನ ಗೆಲ್ಲಿಸಬಾರದೇ
ಕಾಯುತ್ತಿರುವೆ ಈ ನಿನ್ನ ಕಣ್ಣೋಟದ ಕುಡಿ ನೋಟಕ್ಕೆ
ಬೇಗ ಬಂದು ಸೇರು ಗೆಳತಿ.

