ನೆಪ
ನೆಪ
ಬೆಳಗ್ಗೆ ಬೇಗನೆ ಏಳಲು ಮೈ ಮನಸು ಹೂಡಿದೆ ನೆಪ
ಮುಂಜಾವಿನ ಸವಿ ನಿದ್ದೆ ಸವಿಯುವುದೇ ಜಪ
ಮುದುಡಿದ ಮೈಮನವ ಬಡಿದೆಬ್ಬಿಸು ಈಗ
ಎದ್ದೇಳು ಮೈಕೊಡವಿ ದಿನ ಕರೆಯುತಿದೆ ಬೇಗ
ಸಾಧಿಸಲು ಬಹಳಷ್ಟಿದೆ ಮುನ್ನುಗ್ಗು ಬಾ ನೀನು
ಹಾರಲು ನೆಪಹೂಡಿದರೆ ಸಿಗುವುದೇ ವಿಹಗಕೆ ಬಾನು
ತುಂಟ ಮನವು ಹೇಳುವುದು ನೂರೆಂಟು ಕುಂಟುನೆಪ
ನೆಪಹೂಡುವ ಮನದಲ್ಲಿ ಇರಿಸು ಗುರಿಸಾಧಿಸುವ ನೆನಪ
ನೆಪಗಳಿರುವುದು ನೂರೆಂಟು ಆದರೆ ಗುರಿಯೆಡೆಗೆ ಒಂದೇ ದಾರಿ
ಸಾಗುವ ದೃಢ ಛಲದಿ ಬೀಳದೆ ಎಲ್ಲೂ ಜಾರಿ
ಪರಿಶ್ರಮವೇ ಯಶಸ್ಸಿಗೆ ಮೂಲ ಹೇಳುವ ಎಲ್ಲೆಡೆ ಸಾರಿ
ಯಶಸ್ಸಿನ ಓಟಕೆ ಆಗದಿರಲಿ ನೆಪಗಳ ಗಂಟು ಭಾರಿ
