STORYMIRROR

ಅಭಿ ವೈ ಎಂ

Abstract Romance

2  

ಅಭಿ ವೈ ಎಂ

Abstract Romance

ನಾ ಬರೆಯೋ ಕವಿತೆಯಲಿ

ನಾ ಬರೆಯೋ ಕವಿತೆಯಲಿ

1 min
80

ನಾ ಬರೆಯೋ ಕವಿತೆಯಲಿ

ನಿನ್ನದೆ ಸಂಭಾಷಣೆ

ಪದಗಳ ನಡುವಲ್ಲು

ಕಾಡುವ ಆಕರ್ಷಣೆ

ಎಡೆಬಿಡಿದೆ ಎದೆಯಲ್ಲಿ

ನಿನ್ನದೆ ಆರಧಾನೆ

ಮನಸೇಕೋ ಸ್ಥಿರವಾಗಿ ನಿಂತಂತಿದೆ

ನಿನ್ನದೆ ಧ್ಯಾನದಲಿ ಮಗುವಾಗಿದೆ


ನಾನಿಗ ತಿಳಿಯದೆನೆ

ನಿನ್ನಂತೆ ಆಗಿರುವೆನು

ಏನಿದು ಗೊಂದಲ

ನಿನ್ನಲೆ ನನ್ನನು ಹುಡುಕುವ ಹಂಬಲ

ತಲೆದೂಗುತಿರುವೆ 

ತಲೆತುಂಬಾ ನಿನ್ನ ಆಲೋಚನೆಗೆ

ನೀ ಕಣ್ಣಮುಂದೆ 

ಬಂದರೆ ಬಂದಂತೆ ಸ್ವರ್ಗವೆ ಈ ಧರೆಗೆ


ಹಸಿರು ತೊಟ್ಟು 

ಬಣ್ಣದ ಬೊಟ್ಟು

ಕಣ್ಣಿನ ಕಾಡಿಗೆಯ ಒಂದೊಳ್ಳೆ ಗುಟ್ಟು

ನಾಚಿಕೆಯ ಕೆನ್ನಗೆ

ನಾ ಕೊಡುವ ಮುತ್ತು

ಹೆಸರೇಳೆ ನನ್ನದು 

ತುಂಬಾ ಜೋರಾಗಿ

ನಿನ್ನೆಲ್ಲಾ ಅಂದಕೆ ಬದಲಾಗಿ


ಬಾನಿನಲಿ ಮೂಡಿದ

ಚಿತ್ತಾರಕೆ ರಂಗು

ಬಾಳಲಿ ತಂದಿರುವೆ

ಉಲ್ಲಾಸದ ಮೆರುಗು

ನೀನನ್ನ ಕನಸಿನ

ಕಾಣದ ನಾಳೀನ

ಕಲ್ಪನೆಯ ಮುದ್ದಾದ ಹಸುಗೂಸು

ಮೀಸೆ ತುದಿಯ

ತುಂಟ ಕಿರುನಗೆಯ ಸೊಗಸು


Rate this content
Log in

Similar kannada poem from Abstract