STORYMIRROR

ಅಭಿ ವೈ ಎಂ

Drama Tragedy Classics

2  

ಅಭಿ ವೈ ಎಂ

Drama Tragedy Classics

ಜೀವ ಉಳಿದರೆ ಜೀವನವು!..

ಜೀವ ಉಳಿದರೆ ಜೀವನವು!..

1 min
106

ಯಾರ ಜೀವ ಹೆಚ್ಚು ಯಾರಿಗೆ?

ಅವರದೆ ಹುಚ್ಚು ಅವರವರಿಗೆ!,

ದಾಹವೋ? ಅಧಿಕಾರವೋ?

ದುರ್ದೈವವೋ? ಅಂಧಕಾರವೋ?

ನರಳಿದೆ ಜೀವ ಕುಣಿಯೊಳಗೆ!..

ಹೊಣೆಗಾರಾರು ಈ ನೋವಿಗೆ???


ಕಣ್ಣಿಗೆ ಕಾಣದ ಅಣುಕಣವೊಂದು

ಕುಣಿಸಿದೆ ಜಗವನು ಬೆಂಬಿಡದೆ,

ಹಸಿವನು ನೀಗಲು ಅಂಜಿಕೆ ತೊರೆದು

ಜೀವವು ಸೆಣೆಸಿದೆ ಪ್ರತಿಘಳಿಗೆ,

ರಾತ್ರಿಹಗಲುಗಳ ಅಂಧಬೆಳಕುಗಳು,

ಕಳೆದು ಸುರಿವುದೆ ಜ್ಞಾನ ಸುಧೆ...


ಮಾರಣವೋಮವು ಲೆಕ್ಕಮೀರಿದೆ,

ಆದರೂ ಇನ್ನು ಸರಕಾರವೆಂಬುದು

ಮಲಗಿ ನಿದ್ರೆಯ ಮಾಡುತಿದೆ..

ಬಡವನೋ? ಧನಿಕನೋ?,

ಶಕ್ತಿವಂತನೋ? ಶಕ್ತಿಹೀನನೋ?

ಭೇದವಿಲ್ಲದೆ ರೋಗವು ಹರಡುತಿದೆ!..


ಈ ಜಗದೆಲ್ಲಾ ಅಂದಚಂದವು

ಜೀವವಿದ್ದರೆ ನಿನಗೆ ಎಲ್ಲವು!,

ಒಂದೊತ್ತುಂಡರು ನಿಯಮಪಾಲಿಸಿ

ಬಂದೆ ಬರುವುದು ನಾಳೆಗೆ ಪುಣ್ಯವು,

ಹೆಜ್ಜೆ ಹೆಜ್ಜೆಗು ಎಚ್ವರವಹಿಸಿ

ಸಾಗಿಸಿ ನಿಮ್ಮ ಪಯಣವನು,

ನಿಮ್ಮ ಜೀವಕೆ ನಿಮ್ಮದೆ ಹೊಣೆ!,

ಜೀವ ಉಳಿದರೆ ಜೀವನವು!..



Rate this content
Log in

Similar kannada poem from Drama