STORYMIRROR

Geethasaraswathi K

Classics Inspirational Others

3  

Geethasaraswathi K

Classics Inspirational Others

ಮಕ್ಕಳು

ಮಕ್ಕಳು

1 min
163

ಬದುಕಿನ ತೋಟದಿ

ಅರಳಿಹ ಸುಂದರ

ಪುಷ್ಪಗಳಂತಿರೆ ನೀವೆಲ್ಲ

ಮಕ್ಕಳು ದೇವರ 

ಸಮಾನ ಎಂಬರು 

ಅಂತೆಯೇ ನಡೆಯಿರಿ ನೀವೆಲ್ಲ॥

ಹಿರಿಯರ ಮಾತನು 

ಕೇಳುತ ನಡೆದರೆ

ಮಕ್ಕಳ ಬಾಳಿಗೆ ಪುಣ್ಯವಲಾ

ಮಕ್ಕಳು ಬಾಳಲಿ

ಉನ್ನತಿ ಕಾಣಲು

ಹಿರಿಯರ ಬಾಳಿನ ಭಾಗ್ಯವಲಾ ॥

ಗುರುಗಳ ಹಿರಿಯರ

ನಡೆನುಡಿ ಅರಿತು

ನ್ಯಾಯ ನೀತಿಯ ಪಾಲಿಸಿರಿ

ಮಾತಲಿ ಸತ್ಯವ

ನಡೆಯಲಿ ಧರ್ಮವ

ಬಿಡದೆಯೆ ಪಾಲಿಸಿ ಬೆಳೆಯಿರಿ॥  

ಸೆಳೆತದ ಗೋಜಿಗೆ

ಹೋಗದೆ ಮಕ್ಕಳೆ

ಮನವನು ಹಿಡಿದು ಇಟ್ಟಿರಲು 

ಸಾಧನೆ ಪಥದ

ಜಯದ ಮೆಟ್ಟಿಲು

ಏರಲು ಬಹು ಸುಲಭ ॥


এই বিষয়বস্তু রেট
প্রবেশ করুন

Similar kannada poem from Classics