ಮಾತೆ
ಮಾತೆ
ಏಕಾಂಗಭಾವದೊಳು
ನಾ ತೊಳಲುತಿರುವಾಗ
ನಗೆಯ ಸೂಸುತ ಬಂದು
ಹೃದಯ ಬಂಧುವಾದೆ
ಸಾವಿರ ನೋವುಗಳು
ನಿನ್ನದೇ ಆಗಿರಲು
ನನ್ನೆಲ್ಲಾ ನೋವನು
ಪರಿಹರಿಪ ಫಣ ತೊಟ್ಟೆ
ನಿನ್ನ ಬಿಟ್ಟೆನಗೆ
ಅನ್ಯ ದೈವವದುಂಟೆ
ನೀ ನನ್ನ ದೇವತೆ
ಓ ನನ್ನ ಮಾತೆ
ಉಪ್ಪಿಗಿಂತ ಮಿಗಿಲಾದ
ರುಚಿಯುಂಟೆ ಷಡ್ರಸದಿ
ನಿನಗಿಂತ ಮಿಗಿಲಾದ
ಬಾಂಧವ್ಯವುಂಟೆ ಈ ಜಗದಿ
ನೋವ ಮರೆಸುವ ನಿನ್ನ
ನೆನಹುಗಳೆ ಸಾಕೆನಗೆ
ಹೋರಾಡಿ ಗೆಲುವ
ಚೈತನ್ಯ ತುಂಬಲು