ಕನಸುಗಳು ತೊರೆದಾಗ
ಕನಸುಗಳು ತೊರೆದಾಗ
1 min
113
ಮನಸುಗಳೆರಡು ಮುರಿದ ಮೇಲೆ ಯಾಕೀ ಈ ಕವನ...
ಕಣ್ಣೀರಿನ ಹನಿಗಳ ನಡುವೆ
ಮುಗಿದು ಹೋಗಿದೆ ಜೀವನ...!
ಇಬ್ಬನಿಯ ಸಂಜೆಯಲಿ
ನಾವು ಹೊರಟ ಪ್ರವಾಸ...
ಬೆಳದಿಂಗಳ ರಾತ್ರಿಯಲಿ
ಸಿಹಿ ಮುತ್ತುಗಳ ಪ್ರವಾಹ..!
ಆ ಸವಿ ನೆನಪುಗಳು
ಹೊರಟಿವೆ ಮೆರವಣಿಗೆ...
ಸಾವಿಂಚಿನ ಪ್ರೀತಿಯಲೂ
&
Advertisement
nbsp; ಮುಗಿಯದ ಬರವಣಿಗೆ..!!
ನಾ ನಡೆವ ಹಾದಿಯಲೂ
ನಿನ್ನೊಲವಿನ ಗುರುತು...
ಪ್ರತಿ ಹೆಜ್ಜೆಯೂ ಸೋಲುತ್ತಿವೆ
ಆ ಪ್ರೀತಿಯ ಮರೆತು...!!
ಸುಮರಂಗವೂ ಬಾಡುತ್ತಿದೆ.
ನಿನ್ನ ದಾರಿಯ ಕಾದು...
ಕನಸುಗಳು ಮುರಿಯುತಿದೆ
ನಿನ್ನ ಕೋಪಕ್ಕೆ ಬಿದ್ದು...!!
ಓ ನಲ್ಲೆಯೇ ಮರೆತುಬಿಡು
ಆ ನಿನ್ನಯ ಮುನಿಸು...
ಪ್ರತಿಕ್ಷಣವೂ ಕೇಳುವೆನು
ನಾ ನಿನ್ನಯ ಮನಸು...!!