ಹಾವು ಏಣಿ
ಹಾವು ಏಣಿ
ಪರಮ ಪದ ಸೋಪಾನ
ಸೇರಲು ಬೇಕು ಆಟ
ಹಾವು ಏಣಿ ಆಟ
ಹಾವಿನ ಬಾಯಿಗೆ ಸಿಲುಕಿ
ಜರ್ರನೆ ಕೆಳಗಿಳಿದು
ಮತ್ತೆ ಏಣಿ ಹುಡುಕುತ
ಏಣಿ ಸಿಕ್ಕಾಗ ಸರ್ರನೆ
ಸರಸರನೆ ಮೆಲಕ್ಕೆ ಏರುತ್ತಾ
ಸಂತೋಷ ಪಡುತ್ತಾ
ಮತ್ತೆ ಹಾವಿನ ಬಾಯಿಗೆ
ಸಿಲುಕಿ ಮನನೊಂದು
ತಿರುಗಿ ಕೆಳಗೆ ಬೀಳುತ್ತಾ
ಮೇಲಕ್ಕೆ ಏರುತ್ತಾ
ಕೆಳಗೆ ಬೀಳುತ್ತಾ
ಏರಿ ಇಳಿಯುವ ಆಟ
ಪರಮಪದ ಸೋಪಾನ
ಪಟದ ಆಟ ಇದೋ
ಜೀವನದ ಹಾವು ಏಣಿ ಆಟ
