ಗೋಮಾತೆ
ಗೋಮಾತೆ
ಜಗಕೆ ತಾಯಿ ಗೋಮಾತೆ
ವಾತ್ಸಲ್ಯದಿ ಹಾಲುಣಿಸುವಳು ಅಮೃತದಾತೆ
ಮುಕ್ಕೋಟಿ ದೇವತೆಗಳ ಆಶ್ರಯದಾತೆ
ಕ್ಷೀರವ ಧಾರೆಎರೆವಳು ಈ ಮಾತೆ
ಗೋಮೂತ್ರ ಸಕಲ ಕಾರ್ಯಕ್ಕೆ ಶುಭಕರ
ಮಾಡೋಣ ಗೋವ ಮುಟ್ಟಿ ನಮಸ್ಕಾರ
ನಿನಗೆ ನಮ್ಮ ಕೋಟಿ ಕೋಟಿ ವಂದನೆ
ಕಟುಕರಿಗೆ ಅರಿಯದಾಗಿದೆ ನಿನ್ನಯ ವೇದನೆ
ಮಾಡದಿರಿ ಗೋಮಾತೆಯ ಹನನ
ಪೂಜಿಸಿರಿ ಅವಳನ್ನು ಪ್ರತಿದಿನ
ಕಳೆಯುವುದು ಮಾಡಿದ ಪಾಪ
ಇರದು ಜೀವನಕೆ ಪರಿತಾಪ
