ಬಿಂಬ-ಪ್ರತಿಬಿಂಬ
ಬಿಂಬ-ಪ್ರತಿಬಿಂಬ


ಬಿಂಬ ನೀನು
ಪ್ರತಿಬಿಂಬ ನಾನು
ದೇಹಿ ನೀನು
ದೇಹ ನಾನು
ನೋಟ ನೀನು
ನೇತ್ರ ನಾನು
ಶ್ರವ್ಯ ನೀನು
ಶ್ರವಣ ನಾನು
ಪ್ರಾಣ ನೀನು
ಘ್ರಾಣ ನಾ
ಹೃಷೀಕ ನಾನು
ಹೃಷಿಕೇಶ ನೀನು
ಧ್ಯೇಯ ನೀನು
ಧ್ಯಾನ ನಾನು
ಮುಕ್ತ ನೀನು
ಭಕ್ತ ನಾನು
ಸೂತ್ರ ನೀನು
ಪಾತ್ರ ನಾನು
ಬಿಂಬ ನೀನು
ಪ್ರತಿಬಿಂಬ ನಾನು
ಬಿಂಬವಿರದೆ
ಪ್ರತಿಬಿಂಬವಿಲ್ಲ
ಬಿಂಬ ಬೇಕು
ಪ್ರತಿಬಿಂಬಿಸಲು