ಅನುರಾಗದ ವಿಜ್ಞಾಪನೆ
ಅನುರಾಗದ ವಿಜ್ಞಾಪನೆ
ನೀ ಬಂದೆ ಎದೆಯದನಿ
ಕಂಪಿಸಿದೆ ಹಿತವಾಗಿ
ದಾರಿತಪ್ಪಿದೆ ಈ ನನ್ನ ಮನವು l
ತಿಳಿಯದೆ ನಿನ್ನೆಡೆಗೆ
ಬಂದಿದೆ ಸ್ವೀಕರಿಸು
ದೂರತಳ್ಳದೆ ಆಲಂಗಿಸು ಕಾದಿರುವೆ ನಾ ll
ಇದ್ದುಬಿಡುವೆ ಉಸಿರಾಗಿ
ಅಪ್ಪಿಬಿಡುವೆ ಲತೆಯಾಗಿ
ಬೆರತುಬಿಡುವೆ ನಿನ್ನೊಳು ಬದುಕಾಗಿ ನಾ l
ಪ್ರೇಮಿಸುವೆ ದಣಿಯದೆ
ಸ್ಪಂದಿಸುವೆ ಭಾವನೆಗೆ
ವಿಜ್ಞಾಪಿಸುವೆ ಅನುಮತಿ ನೀಡು ಪ್ರೀತಿಗೆ ll
ಒಪ್ಪಿಬಿಡು ಪ್ರೇಮವಾ
ಕೊಟ್ಟುಬಿಡು ಹೃದಯವ
ಅಪ್ಪಿಬಿಡು ಬಯಸಿ ಬಂದ ಅನುರಾಗವ l
ಪ್ರೀತಿಸಿಬಿಡು ಪ್ರಾಣವ
ನೀಡಿಬಿಡು ಅನುಮತಿಯ
ಜೀವಿಸಿಬಿಡುವೆ ನಿನ್ನೊಲವಿನಲ್ಲಿ ನಾ ll

