ಅಧಿಕಾರವೆಂಬ ಭ್ರಮೆ
ಅಧಿಕಾರವೆಂಬ ಭ್ರಮೆ
1 min
3.0K
ನೋಡಿ ಯಾರಿಗೆ ಬೇಕು ಅಧಿಕಾರ
ಬನ್ನಿ ಯಾರಿಗೆ ಬೇಕು ಅಧಿಕಾರ
ಎಲ್ಲರೂ ಕೇಳ್ತಾರೆ ಇದು ಬೇಡಿಕೆಯ ವ್ಯಾಪಾರ
ಕಷ್ಟ ಪಟ್ಟು ಸಿಕ್ಕಿತು ನೆನ್ನೆ ನನಗೆ
ಕ್ಷಣ ಕಾಲಕೆ ಬೆಳಕು ಬಂತು ಮನೆಗೆ
ಮನೆಯೆಲ್ಲಾ ಮುನಿಸೇ ತುಂಬಿತು ಕೊನೆಗೆ
ಬನ್ನಿ ಬೇಗ ಸಿಗಲ್ಲ ಇದು ಅಪರೂಪದ ಅಧಿಕಾರ
ಕುರುಡು ಕುದುರೆಗೆ ಚಂಚಲ ನಯನ
ಒಂಟಿ ಕಾಲಿನಲಿ ಅವಸರದ ಆಗಮನ
ಎಂದೂ ನಿಲ್ಲದು ದಾರಿತಪ್ಪಿದ ಪಯಣ
ತಗೊಳಿ ತಗೊಳಿ ಎಲ್ಲರ ಆಸೆ ಈ ಅಧಿಕಾರ
ಹೆಗಲ ಮೇಲಿನ ಇಳಿಸಲಾಗದ ಹೊರೆ
ಮುಡಿಯ ಕೀರೀಟದೊಳಗೆ ಕಾಣದ ಬರೆ
ಮಾಯವಾಗುವುದು ಸರಿಸುವುದರೊಳಗೆ ತೆರೆ
ತಡ ಯಾಕೆ ಬನ್ನಿ ಎಲ್ಲರಿಗೂ ಬೇಕು ಅಧಿಕಾರ
ನಿಮ್ಮಲ್ಲೇ ಉಳಿಯುವುದು ಖಚಿತವಲ್ಲ
ಅರಳೀ ಕಟ್ಟೆಯ ಕುರ್ಚಿ, ಸಾವಿನಷ್ಟು ಉಚಿತವಲ್ಲ
ಯಾರು ಮೇಲೆ, ಯಾರು ಕೆಳಗೆ, ಆ ಕಾಲವೇ ಬಲ್ಲ
ಯಾರಿಗೂ ಬೇಡ ಇದು ಮಾಯಾಮೃಗದ ಅವತಾರ