ಸ್ವಯಂ ಸಂಕೋಲೆ - Paranoia
ಸ್ವಯಂ ಸಂಕೋಲೆ - Paranoia

1 min

203
ಭಾವನೆಗಳು ಭೂತಗಳಾಗಿವೆ
ನೋಟಗಳೇ ಈಟಿಗಳಾಗಿವೆ
ಕನಸ ಕುದುರೆ ಸ್ಮಶಾನದೆಡೆಗೆ ಸವಾರಿ
ಹರಿವ ಹೊಳೆಯು ರಕ್ತದೋಕುಳಿ
ಸುತ್ತಮುತ್ತಲು ಭ್ರಮೆಯ ಹಾವಳಿ
ಜೀವದ ಗೆಳೆಯನೇ ಅಸುರ ವೇಷಧಾರಿ
ಕಬ್ಬಿನ ಹಾಲಿಗೆ ಬೇವಿನೆಣ್ಣೆಯ ಕಲಬೆರಕೆ
ಪ್ರೀತಿಯಲಿ ಅಪ್ಪಲು ನಂಬಿಕ
Advertisement
ೆಗೂ ಹಿಂಜರಿಕೆ
ಹೊಮ್ಮುವ ಮುಖಭಾವನೆಗೆ ಅನುಮಾನವೇ ರೂವಾರಿ
ಅವ್ವನ ಮಡಿಲು ಮುಳ್ಳಿನ ಹಾಸಿಗೆ
ಅಪ್ಪನ ಹೆಗಲೂ ಚುಚ್ಚುವ ಸೀಗೆ
ಪಂಜರದ ಮನೆಯೇ ನೋವುಣಿಸುವ ರೌದ್ರಾವತಾರಿ
ಇಲ್ಲದ ಮಾಯಾಲೋಕಕೆ ಸೆಳೆದವರಾರು
ದಿಕ್ಕೆಟ್ಟ ನನ್ನ ದಡ ಸೇರಿಸುವ ಅಂಬಿಗನಾರು
ಸಂಕೋಲೆಯ ಕಳಚಿ ಬೆಳಕ ತೋರಿಸುವನಾ ಉದಾರಿ