STORYMIRROR

Vijaya Bharathi.A.S.

Romance Classics Others

4  

Vijaya Bharathi.A.S.

Romance Classics Others

ರಂಗು ರಂಗು

ರಂಗು ರಂಗು

2 mins
394

ನಿಶಾಳ ಮದುವೆಗೆ ನಾಲ್ಕು ದಿನಗಳ ಮುನ್ನಾ ದಿನವಾದ ಇಂದು,ಅವರ ಮನೆಯಲ್ಲಿ ಮೆಹಂದಿ ಸಂಭ್ರಮ. ಅವಳ ಆಫೀಸ್ ನ ಗೆಳೆತಿಯರು,ಕಸಿನ್ ಸಿಸ್ಟರ್ಸ್, ಚಿಕ್ಕಮ್ಮ ದೊಡ್ಡಮ್ಮ , ಅತ್ತೆ,ಅತ್ತಿಗೆ ಹೀಗೆ ಮಹಿಳೆಯರ ದೊಡ್ಡ ಗುಂಪೇ ನೆರೆದಿತ್ತು. ಸುಮಾರು ಮೂವತ್ತು ಜನರಿಗೆ ಮೆಹಂದಿ ಮುಗಿಯುವ ಹೊತ್ತಿಗೆ ರಾತ್ರಿ ಹತ್ತು ಹೊಡೆದಿತ್ತು. ಎಲ್ಲರೂ ಎರಡೂ ಕೈ ಗಳನ್ನು ಅಲ್ಲಾಡಿಸದೇ ಇಟ್ಟುಕೊಂಡು ಹಾಗೇ ಅಲ್ಲಿ ಇಲ್ಲಿ ಅಡ್ಡಾಡುತ್ತಾ, ಒಬ್ಬರಿಗೊಬ್ಬರು ಮುಟ್ಟಿಕೊಳ್ಳದೇ ಮದುವೆ ಹುಡುಗಿ ನಿಶಾಳನ್ನು ರೇಗಿಸಿ ಕೊಂಡು ಹುಯಿಲು ಮಾಡುತ್ತಿದ್ದರೆ, ಆ ಮನೆಯ ಗಂಡಸರು ಸಿಡಿ ಮಿಡಿ ಗುಟ್ಟತೊಡಗಿದರು. ಇಂದು ಊಟ ಗೀಟ ಇಲ್ಲವೋ ಹೇಗೆ ?ಎಂದು ಕೂಗಾಡಿದಾಗ, ನಿಶಾಳ ಅಮ್ಮ ಹಾಗೂ ಚಿಕ್ಕಮ್ಮ ಎಲ್ಲರಿಗೂ ಊಟ ಬಡಿಸಲು ಎದ್ದರು

.

ಮನೆ ಮಂದಿಯೆಲ್ಲಾ ಮೆಹಂದಿ ಹಾಕಿಸಿಕೊಂಡಿದ್ದರಿಂದ ಯಾರಿಗೂ ತಮ್ಮ ಕೈ ಗಳಿಂದ ತಾವು ಊಟ ಮಾಡಲು ಆಗದಂತಿದ್ದಾಗ, ಎಲ್ಲರಿಗೂ ಊಟವನ್ನು ಕಲೆಸಿ

ಬಾಯಿಗಿಡುವ ವೇಳೆಗೆ ನಿಶಾಳ ಅಮ್ಮ ಮತ್ತು ಚಿಕ್ಕಮ್ಮ ನಿಗೆ ಸಾಕುಸಾಕಾಗಿ ಹೋಯಿತು. ಅಂತೂ ಇಂತೂ ಮಧ್ಯರಾತ್ರಿ ಕಳೆಯುವವರೆಗೂ ಮೆಹಂದಿ ಸಂಭ್ರಮಗಳು ಮುಗಿದು ಎಲ್ಲರೂ ತಮ್ಮ ತಮ್ಮ ಕೈಗಳನ್ನು ತೊಳೆದುಕೊಂಡು ತಮ್ಮ ಕೈಗಳಿಗೆ ಅಂಟಿಕೊಂಡಿದ್ದ ರಂಗು ರಂಗಿನ ಬಗ್ಗೆ ಮಾತನಾಡಿಕೊಳ್ಳುತ್ತಾ ಯಾರ ಕೈಗಳಲ್ಲಿ ಬಣ್ಣ ಚೆನ್ನಾಗಿ ಮೂಡಿದೆಯೋ ಅವರವರ ಗಂಡಂದಿರು ಅವರನ್ನು ಹೆಚ್ಚು ಹೆಚ್ಚು ಪ್ರೀತಿಸುತ್ತಾರೆ ಎಂದು ಹೇಳುತ್ತಾ, ನಿಶಾಳ ಕೈಗಳನ್ನು ನೋಡಿ ಅವಳನ್ನು ರೇಗಿಸುತ್ತಿದ್ದರು.

ಎಲ್ಲರ ಕೈಗಳಿಗಿಂತಲೂ ಮದುವೆಯ ಹುಡುಗಿ ನಿಶಾಳ ಕೈಗಳಲ್ಲಿ ಮೆಹಂದಿಯ ರಂಗು ತುಂಬಾ ಕಡಿಮೆ ಇದ್ದು, ನಿಶಾಳಿಗೆ ಒಂದು ರೀತಿ ಬೇಸರವಾಯಿತು. ಅಂದರೆ

ತನ್ನ ಗಂಡ ನಿತಿನ್ ತನ್ನನ್ನು ಹೆಚ್ಚು ಪ್ರೀತಿಸುತ್ತಾನೋ ಇಲ್ಲವೋ ಎಂದು ಯೋಚಿಸುತ್ತಾ, ಕಡೆಗೆ ಮನಸ್ಸು ತಡೆಯದೇ ಆ ಮಧ್ಯರಾತ್ರಿ ಯಲ್ಲೇ ನಿತಿನ್ಗೆ ಫೋನ್ ಮಾಡಿದಳು.

ಇಷ್ಟು ಮಧ್ಯರಾತ್ರಿಯಲ್ಲಿ ನಿಶಾಳ ಫೋನ್ ನೋಡಿ ಗಾಬರಿಗೊಂಡ ನಿತಿನ್ ಗಡಬಡಿಸಿ ಫೋನ್ ರಿಸೀವ್ ಮಾಡಿದಾಗ, ನಿಶಾ ಆತಂಕದಿಂದ ಇರುವುದು ತಿಳಿದು

ಕಾರಣವೇನೆಂದು ವಿಚಾರಿಸಿದಾಗ, ನಿಶಾ ತನ್ನ ಮೆಹಂದಿಯ ರಂಗಿನ ಬಗ್ಗೆ ತಿಳಿಸುತ್ತಾ,

"ನಿತಿನ್, ನನ್ನ ಕೈಗಳಿಗೆ ಹಚ್ಚಿಕೊಂಡ ಮೆಹಂದಿಯ ರಂಗು ತುಂಬಾ ಮಂಕಾಗಿ ಕಾಣುತ್ತಿದೆ. ನನ್ನ ಗೆಳತಿಯರೆಲ್ಲಾ 'ನಿನಗೆ ನನ್ನ ಮೇಲಿನ ಪ್ರೀತಿ ಕಡಿಮೆ ಯಾಗುತ್ತದೆ' ಎಂದು ಹೇಳುತ್ತಿದ್ದಾರೆ. ನನಗೆ ತುಂಬಾ ಭಯ ಆಗುತ್ತಿದೆ. ಮೆಹಂದಿಯ ರಂಗು ಕಡಿಮೆ ಕಂಡರೆ ಹೀಗಾಗುತ್ತದೆ ಎನ್ನುತ್ತಿದ್ದಾರೆ. ಇದು ನಿಜವಾ?"

ನಿಶಾಳ ಮಾತುಗಳನ್ನು ಕೇಳಿದ ನಿತಿನ್ ಜೋರಾಗಿ ನಗಲು ಶುರು ಮಾಡಿದ.


"ಮೈ ಡಿಯರ್ ಸ್ಟುಪಿಡ್ ನಿಶಾ, ಇಷ್ಟೊಂದು ವಿದ್ಯಾವಂತೆ ಬುದ್ಧಿವಂತಳಾಗಿರುವ ನೀನು ಯಾವುದೋ ಸಣ್ಣ ಸಣ್ಣ ವಿಷಯಗಳಿಗೆ ಇಷ್ಟೊಂದು ತಲೆ ಕೆಡಿಸಿಕೊಳ್ಳುತ್ತೀಯಾ ಅಂದರೆ ನಿನ್ನ ಈ ಪೆದ್ದುತನಕ್ಕೆ ನಗುವುದೋ ಅಳುವುದೋ ಗೊತ್ತಾಗುತ್ತಿಲ್ಲ. ಮೆಹಂದಿ ತುಂಬಾ ಕಲರ್ ಬರದೇ ಇರುವುದಕ್ಕೂ ನಮ್ಮಿಬ್ಬರ ಪ್ರೀತಿಗೂ ಯಾವುದೆ ಸಂಬಂಧವಿಲ್ಲ. ಅದಕ್ಕೆ ಬೇರೆಯದೇ ಆದ ಸೈಂಟಿಫಿಕ್ ಕಾರಣಗಳು ಇರಬಹುದು.ಈ ರೀತಿ ಬೇಡದೇ ಇರುವ ವಿಷಯಕ್ಕೆ ತಲೆ ಕೆಡಿಸಿಕೊಳ್ಳುವುದರ ಬದಲಿಗೆ ನಮ್ಮಿಬ್ಬರ ಬಗ್ಗೆ ಸುಂದರ ಸ್ವಪ್ನಗಳನ್ನು ಕಾಣುವುದಕ್ಕೆ ಶುರು ಮಾಡು. ಈಗ ನೀನೂ ನೆಮ್ಮದಿಯಾಗಿ ಮಲಗು, ನನ್ನನ್ನೂ ನೆಮ್ಮದಿಯಿಂದ ನಿದ್ದೆ ಮಾಡಲು ಬಿಡು. ಗುಡ್ ನೈಟ್, ಸ್ವೀಟ್ ಡ್ರೀಮ್ಸ್ "


ನಿಶಾಳಿಗೆ ಸಮಾಧಾನ ಮಾಡಿ ಚೆನ್ನಾಗಿ ತಿಳುವಳಿಕೆ ಹೇಳಿ ಅವಳ ಮೌಢ್ಯವನ್ನು ದೂರ ಸರಿಸಿದ.

ನಿತಿನ್ ಜೊತೆಗೆ ಮಾತನಾಡಿದ ನಂತರ ನಿಶಾಳಿಗೆ ಸಮಾಧಾನವಾಯಿತು. ಮೆಹಂದಿಯ ರಂಗಿನ ಚಿತ್ತಾರದ ತನ್ನ ಕೈಗಳನ್ನೇ ನೋಡಿಕೊಳ್ಳುತ್ತಾ ಕನಸಿನ ಲೋಕಕ್ಕೆ ಜಾರಿದಳು.



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Romance