STORYMIRROR

kaveri p u

Romance Inspirational Others

4  

kaveri p u

Romance Inspirational Others

ಪ್ರೀತಿಯ ಪತಿಗೆ ಒಂದಷ್ಟು ಮನವಿ

ಪ್ರೀತಿಯ ಪತಿಗೆ ಒಂದಷ್ಟು ಮನವಿ

1 min
689

ನಸುಕಿನ ಕವಳ ಕಳೆಯುವ ಮುನ್ನವೇ

ಏಳೆನ್ನಬೇಡ,

ಎದ್ದು ಹೂವು ಹರಿಬೇಕು ಎನಬೇಡ!

ಐದಾಗಲಿ ತಡಿ, ಬಾಗಿಲ ಹೊಸ್ತಿಲಿಗೆ

ನೀರು ಉಣಬಡಿಸಿ, ರಂಗೋಲಿ ಸಾರಿಸಿ

ಹೂವ ಹರೆದೇನು, ಅವಸರವೇಕೋ ಗೆಳೆಯಾ?

ಅದು ನನ್ನ ಕೆಲಸ, ನಾನೇ ಏಳುವೆ

ಬೇಗ ಎಬ್ಬಿಸಿದರೆ, ಕೋಪ ಉಕ್ಕುವುದು ಸುಳ್ಳಲ್ಲ, ಚಂಡಿಯಾಗುವುದು ಸುಳ್ಳಲ್ಲ!


ನಾ ಕರೆದ ಸಮಯಕ್ಕೆ

ನೀ ಬೇಗ ಬಂದು ಊಟ ಮಾಡಿಬಿಡು

ನನ್ನನ್ನು ಕೋಪಕ್ಕೆ ಎಡೆಮಾಡಬೇಡ.

ಇಬ್ಬರೂ ಮೊದಲಿನಂತೆ ಒಂದೇ ತಟ್ಟೆಯಲ್ಲಿ ಉಣ್ಣಬಹುದು,

ನನಗೊಂದು ತುತ್ತು ನೀನು

ನಿನಗೊಂದು ತುತ್ತು ನಾನು

ಉಣಿಸಬಹುದು, ಯಾರಿಗೂ ಕಾಣದಂತೆ! 


ತವರಿಗೆ ಹೋದಾಗ ಬೇಗ ಬಾಯೆಂದು

ಫೋನಲ್ಲಿ ತಲೆ ತಿನ್ನಬೇಡ ಆಗಾಗ 

ಪದೇ ಪದೇ ಫೋನಾಯಿಸಿ ಬಾಯೆನ್ನದಿರು ಬೇಗ,

ನೆಟ್ ವರ್ಕ್ ಇಲ್ಲ ಎನ್ನುವ ಸುಳ್ಳು ಹೇಳಲು ಗೊತ್ತಿದೆ ನನಗೆ!

ನಿನ್ನನ್ನು ಬಿಟ್ಟು ನಾ ಹೋಗಲಿ ಎಲ್ಲಿಗೆ

ಬೇಗ ಬರುವೆ, ನಿನ್ನ ಹೃದಯವೇ ಶಾಶ್ವತ ನನಗೆ!

ನೀನೊಬ್ಬ ಬೆಸ್ಟ್ ಫ್ರೆಂಡ್ ನನಗೆ

ಗೆಳೆಯನಂತ ಗಂಡನೇ, ಪತ್ರವಿದು ನಿನಗೆ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Romance