ಅಮ್ಮನ ಆಸೆ
ಅಮ್ಮನ ಆಸೆ
ಅಮ್ಮ ಅಂದರೆ ಎಲ್ಲರಿಗೂ ನೆನಪಾಗೋದು ಅಡುಗೆ ಮನೆಲಿ ಸದ್ದು ಮಾಡ್ತೀರೊ ಜೀವ ಅಂತ. ಆದರೆ ಅವಳ ಸದ್ದು ಬರಿ ಮಕ್ಕಳ ಹಸಿವಿಗೋ ಗಂಡನ ಒಲವಿಗೋ ಅಷ್ಟೇ ಸೀಮಿತ. ಅವಳ ಹಸಿವು ಒಲವು ಕೇಳೋರು ಯಾರು ಇಲ್ಲ ಊಟ ಮಾಡು ಬಾ ಅಂತ ಕೇಳೋ ಆ ಸದ್ದಿಗೆ ನಿನ್ ಮಾಡಿದೆಯಾ ಅನ್ನೋ ಪ್ರತಿಉತ್ತರ ಎಸ್ಟು ಸಮಾಧಾನ ಕೊಡುತ್ತೇ ಅಲ್ವಾ. ಒಂದೊಂದ ಸಲ ಯಾರ ಯಾರ ಬಗೇನೋ ತಿಳಿದುಕೊಳ್ಳೋಕೆ ಹೋಗತಿವಿ. ಅವರ ಲೈಫ್ ಹಿಸ್ಟರಿ ಬಗ್ಗೆ ರಿಸರ್ಚ್ ಮಾಡ್ತೀವಿ ಅವರ ಬುಕ್ಸ್ ಓದುತ್ತಿವಿ. ಆದರೆ ಕಣ್ಣು ಮುಂದೆನೆ ಇರೋ ಅಮ್ಮನ ಬಗ್ಗೆ ತಿಳಿದುಕೊಳ್ಳಬೇಕು ಅಂತ ಅನಿಸೊದೆ ಇಲ್ಲ .. ಯಾಕೆ ? ಅಂತ ನನಗೆ ಉಂಟಾದ ಪ್ರಶ್ನೆಯಿದು. ಇದು ನನ್ನ ಅಮ್ಮನ ಕಥೆ ಎಲ್ಲರ ಅಮ್ಮಂದಿರ ಕಥೆಯೂ ಇದೆ ಅಲ್ವೇ?
16 ವಯಸ್ಸಿಗೆ ಅಮ್ಮನ ಮದುವೆ. ಅಷ್ಟು ಬೇಗ ಮದ್ವೆ ಯಾಕೆ ಅಂತ ಎಲ್ಲಾರನು ಕೇಳಿದ್ರೆ ಅಮ್ಮನ ಬಿಟ್ಟು ಅವರೆಲ್ಲರ ಉತ್ತರ (5 ವರ್ಷಕ್ಕೆ ಅಪ್ಪನ ಕಳುಕೊಂಡಲು ಮತ್ಯಾರು ಅವಳನ್ನ ನೋಡ್ತಿದ್ರೂ?) ಅದಕ್ಕೆ ಅಷ್ಟು ಬೇಗ ಮದುವೆ ಅಂದ್ರು. ಆದರೆ ಇದೇ ಪ್ರಶ್ನೆ ನಾ ಅಮ್ಮನ ಬಳಿ ಕೇಳಿದಾಗ ಹೇಳಿದ್ದು ಅಗೆಲ್ಲ 16 ವರ್ಷ ಆಗಿದ್ದು ತಕ್ಷಣ ಮದುವೆ ಮಾಡುಬಿಡುತ್ತಿದರೂ ಅಂತ .
ಸರಿ ಅಂತ ಸುಮ್ನೆ ಅದೇ..
ಒಂದಿನ ಅಮ್ಮನ ಬೀರು ಅಲ್ಲಿ ಸೀರೆಗಳ ಮಧ್ಯೆ ಸಿಕ್ಕ ಒಂದು ಹಳೆ ಬುಕ್ ಸುಮಾರು 10 ವರ್ಷ ಆಗಿರಬಹುದು. ಪುಟಗಳೆಲ್ಲ ಹಳದಿ ಬಣ್ಣ ಆಗಿತ್ತು. ಏನು ಅಂತ ನೋಡಿದರೆ ಮೊದಲ ಪುಟದಲ್ಲಿ ರಂಗೋಲಿ. ಮೊದಲಿಗೆ ಸ್ವಲ್ಪ ನಗು ಬಂತು ಆಮೇಲೆ 3 ರಂಗೋಲೆ ಆದಮೇಲೆ ಒಂದು ಸಾಂಗ್ (ಎಲ್ಲೋ ಅದು ಎಲ್ಲೋ ಕಿವಿ ತುಂಬೊ ರಾಗ ಹಾಡು) ಆಮೇಲೆ ಒಂದಸ್ಟು ಸಾಲುಗಳು
ನಾನು 10ನೆ ತರಗತಿ ಚನ್ನಾಗಿ ಓದಿ ಕಾಲೇಜ್ ಗೆ ಸಿಟಿಗೆ ಹೋಗಿ ಓದ್ತಿನಿ ಆಮೇಲೆ ಡಾಕ್ಟರ್ ಕೋರ್ಸ್ ಮಾಡಲು ಬೆಂಗಳೂರಿಗೆ ಹೋಗ್ತೀನಿ ಅಂತ ಅಪ್ಪ ನಿನ್ನ ಕಾಯಿಲೆನಾ ನಾನೇ ವಾಸಿ ಮಾಡ್ತೀನಿ ಅಂತ ಎಲ್ಲಾ ಬರದಿದ್ದು ನೋಡಿ ಅನಸಿದ್ದು ..... ಈ ಮುಗ್ದತೆ ಬರೀ ಆಗಿನ ಕಾಲದಲ್ಲಿ ಇತ್ತು. ನಾವೆಲ್ಲ ಸ್ವಾರ್ಥದ ಪ್ರಪಂಚದಲ್ಲಿ ಇದ್ದೀವಿ.
ಅವರ ಮಾತಾಡ್ಸಿಲ್ಲ . ಇವರತ್ರ ಇದು ಇದೆ. ನಮ್ಮ ಅತ್ರಾ ಅದಿಲ್ಲ. ಇದನ್ನೇ ನಮ್ಮ ಜೀವನ ಅನಕೊಂಡು ಬದುಕಟತಿದೀವಿ ಅನಸಕ್ಕೆ ಶುರು ಆಯ್ತು.
ಅಮ್ಮನಿಗೆ ಹಾಡೋದು ಅಂದರೆ ತುಂಬಾ ಇಸ್ಟ. ಒಂದು 15 ಹಾಡುಗಳನ್ನು ಬರ್ದುಕೊಂಡಿದಳು ನಮ್ಮ ಚಿಕ್ಕಮ್ಮ ನಾ ಒಂದು ಸಲ ಕೇಳದೆ ಎನ್ ಇಷ್ಟು ಹಾಡು ಬರ್ದಿದ್ದಾರೆ ಅಂತ. ಅವರು ಹೇಳಿದ್ದು ನಿಮ್ಮಅಮ್ಮ ಆವಾಗ ಪ್ರತಿದಿನ 2 ಹಾಡು ಪ್ರಾಕ್ಟೀಸ್ ಮಾಡಿ ಹಾಡ್ತಾ ಇದ್ದಳು. ಯಾರದೆ ಮದುವೆ ಆದರೂ ಮೈಕ್ ಅವಳಿಗೆ ಕೊಡ್ತಿದ್ರು. ಅಷ್ಟು ಚನ್ನಾಗಿ ಹಾಡ್ತಾ ಇದ್ದಾಳೆ ಅಂದ್ರು.
ಇತರ ಎಷ್ಟೋ ಆಸೆ ಇದೆ ಅಮ್ಮಂಗೇ. ಯಾರಿಗೂ ಗೊತ್ತಿಲ್ಲ
ಇದನ್ನೆಲ್ಲಾ ತಿಳ್ಕೊಂಡ ಮೇಲೆ ಅಮ್ಮನ್ನ ಏನೇನೋ ಪ್ರಶ್ನೆ ಕೇಳಬೇಕು ಅನಿಸಿತು.
ನಿನ್ ಯಾಕ್ ಮತ್ತೆ ಓದಲಿಲ್ಲ ?
ನಿನ್ನ ಕನಸ್ಸು ಆಸೆಗಿಂತ ನನ್ನ ಮಕ್ಕಳೇ ಮುಕ್ಯ ಅಂತ ಯಾಕ್ ಯೋಚನೆ ಮಾಡಿದೆ?
ಎಲ್ಲದಕ್ಕೂ ಯಾಕೆ ಯಾಕೆ? ಅನ್ನೋ ಪ್ರಶ್ನೆಗೆ ನಾನು ಅಮ್ಮನಿಗೆ ಕೇಳಿದರೆ ಅವಳ ಉತ್ತರ ಒಂದೇ, ಅದು ಸಣ್ಣ ನಗು ಆಗಿರುತ್ತಿತ್ತು.
