ವಚನ ನೀಡುವಾ
ವಚನ ನೀಡುವಾ
ಹೆಜ್ಜೆ ಮೇಲೆ ಹೆಜ್ಜೆ ಹಾಕಿ
ನಿನ್ನನ್ನೇ ಅನುಸರಿಸುವ ವಚನವ ನೀಡಿ
ಕಷ್ಟ-ಸುಖಗಳಿಗೆ ಸಮಾನ ಹೆಗಲು
ನೀಡುವ ಭಾಷೆಯ ನೀಡಿ
ಪರಸ್ಪರ ಗೌರವಿಸುವ ಆಣೆಯ ಮಾಡಿ
ದುಗುಡ-ದುಮ್ಮಾನಗಳನ್ನು ದೂರವಿರಿಸಿ
ನಡೆಯುವ ಎಂದಿಗೂ ಜೊತೆಯಾಗಿ
ಏಳೇಳು ಜನ್ಮಕ್ಕೂ ಸಂತೋಷವಾಗಿ

