STORYMIRROR

Geethasaraswathi K

Classics Inspirational Others

4  

Geethasaraswathi K

Classics Inspirational Others

ಸೂಪರ್ ಪವರ್

ಸೂಪರ್ ಪವರ್

1 min
233

ಮಾನವನ ಮೇಧಾಶಕ್ತಿ 

ಜಗದ ಅದ್ಭುತ ಶಕ್ತಿ

ಚಿಂತನದ ಮಂಥನದ 

ಕಾರ್ಯಕಿದೆ ಸೂಪರ್ ಪವರ್॥

ನೋವು ತುಂಬಿದ ಮನವ

ಹಗುರಗೊಳಿಸುವ ನಗುವ

ಪಡೆದಿಹ ಮನುಜಗೆ

ನಗುವೊಂದು ವರದಾನ॥

ಹಕ್ಕಿಯಂತೆ ಹಾರಬಲ್ಲ 

ಮೀನಿನಂತೆ ಈಜಬಲ್ಲ 

ಮಂಗಳನ ಅಂಗಳದಿ

ಇಳಿದ ಸೂಪರ್ ಪವರ್॥

ಸಾಧನೆಯ ಹಾದಿಯಲಿ

ಬಳಸಿದರೆ ಸೂಪರ್ ಪವರ್

ಸಿದ್ಧಿಯನು ಪಡೆದು

ಆಗುವನು ಸೂಪರ್ ಮ್ಯಾನ್


Rate this content
Log in

Similar kannada poem from Classics