ಸಾಕೇತ್ ಅಮರ್ ರಹೇ
ಸಾಕೇತ್ ಅಮರ್ ರಹೇ
ಸಾಕೇತ್ ಅಮರ್ ರಹೇ
----------------------------------
ಸುಂದರಾಂಗ ಸುಂದರನೆ
ಸುರದ್ರೂಪಿ ಚೆಲುವನೆ
ಸಮತಾ ರಾಜ್ಯದ ಕನಸುಗಾರನೇ
ವಂದನೆಯೋ ವಂದನೆಯು
ಬಾರಿಬಾರಿ ಹೇಳುವೆವು
ಸಾರಿಸಾರಿ ಹೇಳುವೆವು
ಕೋಟಿ ಕೋಟಿ ವಂದನೆಯ
ಜಾತಿಯನ್ನು ಜನಿವಾರವನ್ನೂ
ಯಜ್ಞ ಭಟ್ಟರ ಹೋಮಕುಂಡಕೆ
ಎಸೆದು ಬಂದೆ
ಬಂಗಲೆಯನ್ನೂ ಸಕಲಸಿರಿ ಸಂಪತ್ತು
ಆಸ್ತಿಯ ವಾರಸುದಾರಿಕೆಗೆ ಬುದ್ಧನಾದೆ
ಸಮಸಮಾಜದ ಸೃಷ್ಟಿಗಾಗಿ ಸಿದ್ಧನಾದೆ
ಶಕ್ತಿಯಂತೆ ಸೃಷ್ಟಿಯಂತೆ
ರಟ್ನಹಳ್ಳಿ ಅಣುಕುಲುಮೆಯಂತೆ
ಅಣುಅಣುವಿನ ಕಣದ ವಿಷವಾಳುವ
ಸರ್ಪದ ಕತೆಯ ಜನತೆಗೆ ಸತ್ಯ ಸಾರಿದ ನಾಯಕನೆ
ಚರಿತ್ರೆಯಲ್ಲಿ ಧೂಳಾದ
ದುಡಿದವರ ದುಡಿಸಿಕೊಂಡು ಮೆರೆದವರ
ಕಥೆಯನ್ನು ಶೋಧಿಸಿಶೋಧಿಸಿ
ನಿಜದ ಇತಿಹಾಸ ಏನೆಂದರಿಯದವರಿಗೆ
ಗತಕಾಲದ ಚರಿತೆಯ ಪುಟಗಳ ಬಿಚ್ಚಿದ
ಇತಿಹಾಸಕಾರನೇ
ವರ್ಗಕುಲುಮೆಯ ಸಂಘರ್ಷದಲಿ
ಹದಗೊಂಡ ಹರಿಕಾರನೆ
ವರ್ಗಸಮರದ ಸೇನಾನಿಯೇ
ಕೋಟಿ ಕೋಟಿ ವಂದನೆಯೋ
ಬಾರಿಬಾರಿ ಹೇಳುವೆವು
ಸಾರಿಸಾರಿ ಹೇಳುವೆವು
ಕೋಟಿ ಕೋಟಿ ವಂದನೆಯ
ಮಲೆನಾಡ ಮೆಕ್ಕಲು ಮಣ್ಣಿನ
ಒಕ್ಕಲ ಮಕ್ಕಳ ಬಿಡುಗಡೆಗಾಗಿ
ವರ್ಗಸಮರದ ಸಂಘರ್ಷದಲಿ
ಪ್ರಾಣವನೇ ಕೊಟ್ಟು ಹುತಾತ್ಮನಾದೆ
ಅಮರ ವೀರನೇ ನಿನ್ನಾಶಯಗಳ
ವಾರಸು ನಾವು ಭಾರತ ಮಾತೆಯ
ಮಡಿಲಮಕ್ಕಳು ಹೇಳುವೆವು
ಕೋಟಿ ಕೋಟಿ ವಂದನೆಯ
---10 ಜುಲೈ 2018
--ಪ್ರಕಾಶ ಕೋನಾಪುರ