STORYMIRROR

Shubha Kamat

Classics Inspirational Others

4  

Shubha Kamat

Classics Inspirational Others

ನಮ್ಮೂರು ತೇರು

ನಮ್ಮೂರು ತೇರು

1 min
367

ಬಂತು ಬಂತು ನಮ್ಮೂರ ತೇರು

ತಂತು ತಂತು ಮೊಗದಲಿ ಏರು

ಆಹಾ ಎಲ್ಲೆಡೆ ಸಂಬ್ರಮ ಸಡಗರ

ಎಲ್ಲರ ಮನೆಯಲಿ ಬಳಗದ ಅಬ್ಬರ


ತಲೆ ಎತ್ತಿ ನಿಲ್ಲಲು ನಮ್ಮೂರ ತೇರು

ಸಾಲದು ನೋಡಲು ಕಣ್ಣುಗಳೆರಡು 

ಸಿಂಗಾರ ಮಾಡಿದ ಬಣ್ಣದ ಬಾವುಟ

ಅಂದದ ಚೆಂದದ ಚೆಲುವಿನ ತೇರು


ಎಳೆಯಲು ಸಾಲದು ನೂರಾರು ಜನರು

ಅದೆಂತಾ ಗಜ ಘಾಂಬೀರ್ಯ ನಡೆಯು

ಜೈ ಜೈ ಕಾರವು ಮೊಳಗುತಲಿರಲು

ರಥಬೀದಿಲಿ ಸೇರಿದ ಸಾವಿರಾರು ಜನರು


ರಥಮಂಟಪ ಏರಿದ ವೆಂಕಟರಮಣ

ಭಕ್ತರು ಎಸೆದ ಬಾಳೆ ಹಣ್ಣಿನ ಮಿಲನ

ಅದೆಷ್ಟು ಉದ್ದದ ರಥ ಕಾಣಿಕೆ ಸಾಲು

ಬಂತು ಬಂತು ಕುಮಟಾ ತೇರು


Rate this content
Log in

Similar kannada poem from Classics