ಮಾರಿ ಜಾತ್ರೆ
ಮಾರಿ ಜಾತ್ರೆ
ಎಂತಾ ಅಂದ ಎಂತಾ ಚಂದ ನಮ್ ಮಾರಮ್ಮ
ನೋಡಲೆರಡು ಕಣ್ಣು ಎನಗೆ ಸಾಲದಮ್ಮ
ಎಂತಾ ರೂಪ ಎಂತಾ ಸೊಬಗು ನಿನ್ನದಮ್ಮ
ನೋಡೋ ಭಾಗ್ಯ ಒಂದು ಒದಗಿಬಂತು ನನಗಮ್ಮ
ಎಂತಾ ಅಂದ ಎಂತಾ ಚಂದ ನಮ್ ಮಾರಮ್ಮ
ನೋಡಲೆರಡು ಕಣ್ಣು ಎನಗೆ ಸಾಲದಮ್ಮ
ಎಂತಾ ಗೆಲುವು ಎಂತಾ ನಗುವು ನಿನ್ ಮೊಗದಲಮ್ಮ
ನಗರವೆಲ್ಲ ಹೊಳಿಯುತಿಹುದು ನಿನ್ ಬೆಳಕಲಮ್ಮ
ಎಂತಾ ಅಂದ ಎಂತಾ ಚಂದ ನಮ್ ಮಾರಮ್ಮ
ನೋಡಲೆರಡು ಕಣ್ಣು ಎನಗೆ ಸಾಲದಮ್ಮ
ಎಂತಾ ಸೊಬಗು ಬರಲು ನೀನು ಊರಲಮ್ಮ
ತುಂಬಿ ತುಳುಕುತಿಹುದು ಮನವು ನಿನ್ ನೋಡಲಮ್ಮ