STORYMIRROR

shristi Jat

Classics Inspirational Others

3  

shristi Jat

Classics Inspirational Others

ಕುಟುಂಬ

ಕುಟುಂಬ

1 min
175

"ಕುಟುಂಬ ಒಂದೆ ಚಾವಣಿಯ ಕೆಳಗೆ ಬಾಂಧವ್ಯಗಳಿಂದ ಕೂಡಿದ ಸ್ತಂಭ"

ತಾಯಿಯ ಮಡಿಲು ಮಮತೆಯ ಮುಗಿಲು       

ತಂದೆಯ ಹೆಗಲು ಆಸರೆಯ ಮೆಟ್ಟಿಲು         

ಒಡಹುಟ್ಟಿದವರ ಒಡಲು ಪ್ರೀತಿಯ ಕವಲು       

ಹಿರಿಯರ ನೇರಳು ವಾತ್ಸಲ್ಯದ ಮಿಗಿಲು

"ಕುಟುಂಬ ಒಂದೆ ಚಾವಣಿಯ ಕೆಳಗೆ ಬಾಂಧವ್ಯಗಳಿಂದ ಕೂಡಿದ ಸ್ತಂಭ"

ಕರುಳಿನ ಬಂಧವಿವು ಏಕತೆಯೆ ಇದರ ಸುಗಂಧ   

ನೆತೃತ್ವದ ಕವಲಿನ ಅನುಬಂಧವಿವು ಒಡನಾಟವೆ ಇದರ ಅಂದ                            

ಕಷ್ಟದಲಿ ಬೆಂದವಿವು ಬಗೆಹರಿದಾಗಿನ ನೋಟ ಚೆಂದ                               

 ಪೂರೈಕೆ ಮೆಟ್ಟಿಲಿನ ಮುಂಬರುದರಿಂದ ಬೆಂಬಲವೆ ಒಬ್ಬರಿಗೊಬ್ಬರ ಸಹಕಾರದಿಂದ

 ಬಳ್ಳಿಯ ಹಾಗೆ ರಕ್ತಸಂಬಂಧ ಒಗ್ಗೂಡಿ ಬಾಳುವುದೆ ಋಣಾನುಬಂಧ                          

ಜವಾಬ್ದಾರಿಯ ಹಾಗೆ ನಾಯಕನ ಹೊಣೆ ಸದಸ್ಯರ ಭವಿಷ್ಯತ್ತಿನ ಚಿಂತೆಯಿಂದ

ಯಶಸ್ಸಿನ ದಡ ಸೇರಿದಾಗ ಎಲ್ಲಾ ಪರಮಾನಂದ.                      

"ಕುಟುಂಬ ಒಂದೆ ಚಾವಣಿಯ ಕೆಳಗೆ ಬಾಂಧವ್ಯಗಳಿಂದ ಕೂಡಿದ ಸ್ತಂಭ"                                                                        



साहित्याला गुण द्या
लॉग इन

Similar kannada poem from Classics