ಕನ್ನಡ
ಕನ್ನಡ
ಹಳ್ಳಿ ಹಳ್ಳಿ ಸೇರಿ ಊರಾಯಿತು
ಊರು ಊರು ಸೇರೀ ನಾಡಾಯಿತು
ಮಹಾ ಶಿಲ್ಪಿ ಗಳಿಂದ ಸುಂದರ ಕಲೆ
ಸಂಸ್ಕೃತಿ ಯನ್ನು ಬಿಂಬಿಸುವುದು ನಮ್ಮ ನೆಲೆ
ನವರಸಗಳ ರಾಸ ಲೀಲೆ
ಬೀಸುತಿರಲು ಕಾಳಿದಾಸನ ಅಲೆ
ಶೃಂಗಾರಕ್ಕೆ ಬೇಲೂರು , ಹಳೇಬೀಡು
ಇದುವೇ ನಮ್ಮ ಕನ್ನಡ ನಾಡು
ಕೋಗಿಲೆಗೆ ಸಮವಾದಕವಿಗಳ
ಗೀತ ಗಾಯನ , ಮನ ತಣಿಸುತಿರಲು
ಸಜ್ಜಾಗಿದೆ , ಹೊಸ ಇತಿಹಾಸ ಬರೆಯಲು
ನಮ್ಮ ನಾಡ ಸೊಬಗನ್ನು ಬಣ್ಣಿಸಲು
ಜೀವತೆತ್ತರು ನಾಡು ನುಡಿಗೆ ಹಲವರು
ಬಿಟ್ಟು ಕೊಡದೇ ತಮ್ಮ ತನವ ಸಾರಿದರು
ಕನ್ನಡ ವನ್ನು ಉಳಿಸುಲು ಎಂದೂ ಮುಂದೆ ಸಾಗುವ
ಸ್ನೇಹದಿಂದಲೇ ಕನ್ನಡ ವನ್ನು ಉಳಿಸಿ ಬೆಳೆಸುವ
