ಹೆಣ್ಣೆಂಬ ಕಾಳಿಕಲಕ್ಷ್ಮಿ
ಹೆಣ್ಣೆಂಬ ಕಾಳಿಕಲಕ್ಷ್ಮಿ
ಹಾಲ್ಗೆನ್ನೆಯ ಮೊಗದಲಿ, ಹಾಲಹಲದ ನೋಟವಿದೆ.
ಹಂಸದಂತ ನಡಿಗೆಯಲಿ, ಭೂಮಿ ತೂಕದ ಭಾರವಿದೆ.
ಮದರಂಗಿ ತುಂಬಿದ ಕೈಯಲಿ, ನೆತ್ತರವು ಘಮ-ಘಮಿಸುತಿದೆ.
ಕಣ್ತುಂಬಿಕೊಳ್ಳೊ ಮಯೂರಿಯ ನಾಟ್ಯದಲಿ, ಧಗಧಗಿಸುವ ಕಾಡ್ಗಿಚ್ಚಿನ ಆರ್ಭಟವಿದೆ.
ಪೂಜಿಸುವ ಲಕ್ಷ್ಮೀಯ ಅಂಶದಲಿ, ಘರ್ಜಿಸುವ ಕಾಳಿಯ ಗುಣವಿದೆ.
