STORYMIRROR

vn neralakatte

Inspirational

4  

vn neralakatte

Inspirational

ಹಾಯ್ಕುಗಳು

ಹಾಯ್ಕುಗಳು

1 min
44


ಕೊರೋನಾ ವಾರ್ಡ್

ತುಂಬಿದಂತೆಲ್ಲ ಎದೆ

ಭಾರವಾಯಿತು


ಜನರಿಲ್ಲದ

ಪಟ್ಟಣದ ತುಂಬೆಲ್ಲ

ಹಕ್ಕಿಯಿಂಚರ


ಗೂಡಲ್ಲಿ ಕೂತ

ಹಕ್ಕಿಯ ಕಣ್ಣ ತುಂಬ

ಸಿಹಿಗನಸು


ಕೊರೋನಾದಿಂದ

ಎಲ್ಲರೂ ಸಮಾನರು!

ಸ್ಪರ್ಶಹೀನರು!


ಮುಚ್ಚಿದ ಕದ

ಒಳಗಿವೆ ಸಾವಿರ

ಕನಸುಗಳು


ದೇವರಿದ್ದಾನೆ

ಕಷ್ಟದಲ್ಲಿ ಚಾಚಿದ

ಕೈಗಳೊಳಗೆ


ನಿದ್ದೆ ಬರದ

ಕಣ್ಗಳಲ್ಲಿ ಅವಳ

ನೆನಪುಗಳು


ಗಾಂಧಿ ವೃತ್ತಕ್ಕೆ

ಸುತ್ತುಹಾಕಿ ಹೋಗಲು

ಶ್ರಮ ಬಹಳ


ಪರಧರ್ಮಕ್ಕೆ

ಬೈದಾಗ ನಾ ಮೆಚ್ಚುವ

ದೇವರು ಮಾಯ


ಹೊಸ ಮಂಚದಿ

ಮಲಗಿದಾಗ ಮರ

ಅತ್ತ ಕನಸು


ರಾಷ್ಟ್ರಧ್ವಜವು

ಇದ್ದ ಶವಪೆಟ್ಟಿಗೆ

ಬಹಳ ಭಾರ


ಹಣ್ಣು ಕಿತ್ತಾಗ

ಗರ್ಭದಿಂದ ಭ್ರೂಣವ

ತೆಗೆದ ಭಾವ


ಭೂಮಿಯೊಡನೆ

ಕಣ್ಣೀರು ಹಂಚಿಕೊಂಡ

ಮೋಡ ಹಗುರ


 










 








Rate this content
Log in

Similar kannada poem from Inspirational